ಹಾಲುಣಿಸುವ ಸ್ವಾತಂತ್ರ್ಯ: ಮಗನ ಜತೆ ಫೋಟೊ ಪೋಸ್ಟ್ ಮಾಡಿದ ನೇಹಾ ಧೂಪಿಯಾ

ಬೆಂಗಳೂರು: ಸ್ತನ್ಯಪಾನ ಕುರಿತು ಜಾಗೃತಿ ಮತ್ತು ಅಗತ್ಯತೆ ಕುರಿತು ಹೇಳಿಕೆ ನೀಡುವ ಮೂಲಕ ಅರಿವು ಮೂಡಿಸುತ್ತಿದ್ದ ನಟಿ ನೇಹಾ ಧೂಪಿಯಾ, ಈ ಬಾರಿ ಸ್ವತಃ ಪುತ್ರನಿಗೆ ಹಾಲುಣಿಸುತ್ತಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.
‘ಫ್ರೀಡಂ ಟು ಫೀಡ್’ ಎನ್ನುವ ಘೋಷವಾಕ್ಯದೊಂದಿಗೆ ನಟಿ ನೇಹಾ ಧೂಪಿಯಾ, ಅಂತರರಾಷ್ಟ್ರೀಯ ಸ್ಯನ್ತಪಾನ ವಾರ ಎನ್ನುವ ಅಭಿಯಾನವನ್ನು ಆರಂಭಿಸಿದ್ದರು.
ಮಗುವಿಗೆ ಹಾಲುಣಿಸುವ ತಾಯಿಯ ಹಕ್ಕು ಮತ್ತು ಅದರ ಅಗತ್ಯತೆ ಹಾಗೂ ಕೆಲಸದ ಸ್ಥಳಗಳಲ್ಲಿ ಮಗುವಿನ ಪಾಲನೆಗೆ ಸೂಕ್ತ ಅವಕಾಶ, ಆದ್ಯತೆ ನೀಡುವುದನ್ನು ಕಂಪನಿಗಳು, ಉದ್ಯೋಗದಾತರು ಪರಿಗಣಿಸಬೇಕು ಎನ್ನುವುದನ್ನು ಈ ಅಭಿಯಾನದ ಮೂಲಕ ಸಾರಲಾಗಿತ್ತು.
ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ದಂಪತಿಗೆ ಅಕ್ಟೋಬರ್ 3ರಂದು ಗಂಡು ಮಗುವಿನ ಜನನವಾಗಿದೆ.
ಚಿರಂಜೀವಿ ಸರ್ಜಾ ಮಗ ರಾಯನ್ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ
6 ತಿಂಗಳ ಪುತ್ರನ ವಿಡಿಯೊ ಹಂಚಿಕೊಂಡ ದಿಯಾ: ‘Can I eat him up?’ ಎಂದ ಲಾರಾ
ಈ ಮೊದಲು ಹೆಣ್ಣು ಮಗುವಿನ ತಾಯಿಯಾದ ಸಂದರ್ಭದಲ್ಲೂ ನೇಹಾ, ಸ್ತನ್ಯಪಾನದ ಕುರಿತು ವಿವಿಧ ಪೋಸ್ಟ್ ಹಂಚಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.