ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ಮಾಪಕ ರಾಜ್ ನಿಡಿಮೋರು ವಿವಾಹವಾಗಿದ್ದಾರೆ. ಈ ಇಬ್ಬರ ಸಂಬಂಧದ ಕುರಿತು ಕಳೆದ ವಾರ ಉಂಟಾಗಿದ್ದ ಊಹಾಪೋಹಗಳಿಗೆ ವಿವಾಹದ ಮೂಲಕ ತೆರೆ ಎಳೆದಿದ್ದಾರೆ. ಸೋಮವಾರ ಬೆಳಿಗ್ಗೆ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಇಬ್ಬರು ಹಸೆಮಣೆ ಏರಿದ್ದಾರೆ.

ಈಶ ಯೋಗ ಕೇಂದ್ರದ ಒಳಭಾಗದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಬೆಳಗಿನಜಾವ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಆತ್ಮೀಯರು, ಕೆಲವು ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಸದ್ಯ, ಸಮಂತಾ ಅವರು ವಿವಾಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಸಮಂತಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಭಾನುವಾರ ತಡರಾತ್ರಿಯಿಂದಲೇ ಈ ಇಬ್ಬರ ವಿವಾಹದ ಕುರಿತು ಸಾಕಷ್ಟು ವದಂತಿಗಳು ಹರಡಲು ಪ್ರಾರಂಭವಾಗಿತ್ತು. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಸ್ವತಃ ಸಮಂತಾ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡು ಮದುವೆಯ ಕುರಿತು ಇದ್ದ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ.

ಈ ಇಬ್ಬರ ವಿವಾಹದ ಕುರಿತು ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ದೇ ಅವರು, ‘ಹತಾಶ ವ್ಯಕ್ತಿಗಳು ಹತಾಶ ಕೆಲಸಗಳನ್ನೇ ಮಾಡುತ್ತಾರೆ’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡು ಕಿಡಿಕಾರಿದ್ದಾರೆ. ರಾಜ್ ಹಾಗೂ ಶಾಮಲಿ 2022ರಲ್ಲೇ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ.

ಸಮಂತಾ ಅವರು ತೆಲುಗು ನಟ ನಾಗ ಚೈತನ್ಯ ಅವರ ಜೊತೆಗೆ 2017ರಲ್ಲಿ ವಿವಾಹವಾಗಿದ್ದರು. ಆದರೆ, 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಬಳಿಕ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ರಾಜ್ ಹಾಗೂ ಸಮಂತಾ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಈ ಜೋಡಿ ಹಸೆಮಣೆ ಏರಿದ್ದಾರೆ.
.Bvlgari Event: ಆಕರ್ಷಕ ಉಡುಗೆಯಲ್ಲಿ ಕಂಗೊಳಿಸಿದ ತಮನ್ನಾ, ಸಮಂತಾ ರುತ್ ಪ್ರಭು.PHOTOS | ಗ್ಲಾಮರಸ್ ಚಿತ್ರಗಳಲ್ಲಿ ನಟಿ ಸಮಂತಾ ರುತ್ ಪ್ರಭು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.