‘ಭೂಪತಿ‘ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾಗಿ ಮಿಂಚಿದ್ದ ನಟಿ ಶೆರಿನ್ ಶೃಂಗಾರ್ ತೂಕ ಇಳಿಸಿಕೊಂಡು ತೆಳ್ಳಗಾಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಈ ’ಭೂಪತಿ‘ಯ ಸುಂದರಿ ಸುಮಾರು 10 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಈ ಹಿಂದೆ ದಪ್ಪಗಿದ್ದ ಪೋಟೊ ಮತ್ತು ಈಗ ಸಣ್ಣಗಾಗಿರುವ ಫೋಟೊವನ್ನು ಕೊಲಾಜ್ ಮಾಡಿ ಇನ್‌ಸ್ಟಾಗ್ರಾಂನಲ್ಲಿಹಂಚಿಕೊಂಡಿದ್ದಾರೆ.

'ಒಂದು ವರ್ಷದಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡ ನಂತರ ನಾನು ಹೀಗೆ ಕಾಣಿಸುತ್ತಿದ್ದೇನೆ. ಈ ಹಿಂದೆ ನಾನು ಕಾಣಿಸುತ್ತಿದ್ದ ರೀತಿಯ ಬಗ್ಗೆಯೂ ನನಗೆ ಖುಷಿಯಿದೆ. ತೂಕ ಇಳಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಜನರು ಮಾತನಾಡುವುದನ್ನು ನಿಲ್ಲಿಸಲು ಸುಲಭವಲ್ಲ. ನಾವು ಒಬ್ಬರನ್ನು ಖುಷಿ ಪಡಿಸಬಹುದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆಯೂ ಮಾತನಾಡಬಹುದು' ಎಂದು ಫೋಟೊ ಜತೆ ಅಡಿಬರಹ ಬರೆದುಕೊಂಡಿದ್ದಾರೆ.

ಈ ಫೋಟೊ ಶೇರ್ ಆದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿ 2 ಲಕ್ಷಕ್ಕೂ ಹೆಚ್ಚು ಮೆಚ್ಚುಗೆಪಡೆದುಕೊಂಡಿದೆ. ಶೆರಿನ್ ಗೆಳೆಯರು, ಅಭಿಮಾನಿಗಳು ಈ ಟ್ರಾನ್ಸಫಾರ್ಮೇಶನ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಶೆರಿನ್ ದಪ್ಪವಿರುವ ಫೋಟೊಗೆ ಟ್ರೋಲಿಗರು 'ಆಂಟಿ' ಎಂದು ಗೇಲಿ ಮಾಡಿದ್ದರು. ಈ ಬಗ್ಗೆಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದ ಶೆರಿನ್, 'ನಾವು ಹೇಗೆ ಕಾಣಿಸುತ್ತೀವಿ ಎಂದು ಜನರು ಬೇಗ ಜಡ್ಜ್ ಮಾಡುತ್ತಾರೆ. ಇಂಥ ಕೆಟ್ಟ ದೃಷ್ಟಿಯಿಂದ ನೋಡುವವರ ಜತೆಯೇ ನಾವು ಬದುಕಬೇಕು. ನಾವು ಹೇಗಿದ್ದೇವೋ ಹಾಗೆಯೇಒಪ್ಪಿಕೊಂಡು ಪ್ರೀತಿಸಿ' ಎಂದು ಉತ್ತರಿಸಿದ್ದರು.

ಶೆರಿನ್ ತೂಕ ಇಳಿಸಿಕೊಂಡಫೋಟೊ ಶೇರ್ ಮಾಡಿದ ನಂತರ ಅನೇಕರು ‘ಡಯಟ್ ಟಿಪ್ಸ್‘ ಕೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶೆರಿನ್, IGTV ವಿಡಿಯೊ ಮೂಲಕ ಟಿಪ್ಸ್ ಶೇರ್ ಮಾಡಿಕೊಂಡಿದ್ದಾರೆ. 'ನಾನು ತೂಕ ಇಳಿಸಿಕೊಳ್ಳಲು ಮಾಡಿದ ಈ ಕಸರತ್ತು, ಡಯೆಟ್ ನಿಮಗೆ ವರ್ಕ್ ಆಗದೇ ಇರಬಹುದು. ಹಾಗಾಗಿ, ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಆ ನಂತರ ಡಯೆಟ್ ಶುರು ಮಾಡಬೇಕು' ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.