ಶ್ರದ್ಧಾ ಟೈಗರ್ ಶ್ರಾಫ್ ನಟನೆಯ ‘ಬಾಗಿ 3’ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ನಾಗಿಣಿಯಾಗಿ ತೆರೆ ಮೇಲೆ ಬರಲಿರುವ ಕುರಿತು ಉತ್ಸುಕರಾಗಿರುವ ಶ್ರದ್ಧಾ ‘ಪರದೆಯ ಮೇಲೆ ನಾಗಿಣಿಯಾಗಿ ಬರುವ ಖುಷಿ ಇದೆ. ನಾನು ಬಾಲ್ಯದಲ್ಲಿ ಶ್ರೀದೇವಿ ಅವರು ನಾಗಿಣಿ ಪಾತ್ರದಲ್ಲಿ ನಟಿಸಿದ ಚಿತ್ರವನ್ನು ನೋಡುತ್ತಾ ಬೆಳೆದಿದ್ದೆ. ಭಾರತದ ಸಾಂಪ್ರದಾಯಿಕ ಜಾನಪದ ಕಥೆ ಹೊಂದಿದ ಇಂತಹ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಇಂತಹ ಅಪ‍್ರತಿಮ ಪಾತ್ರ ಸಿಕ್ಕಿರುವುದು ಖುಷಿ ತಂದಿದೆ. ಅಲ್ಲದೇ ಪ್ರೇಕ್ಷಕರು ಯಾವಾಗಲೂ ಈ ಪಾತ್ರದ ಮೇಲೆ ಆಕರ್ಷಕರಾಗಿರುತ್ತಾರೆ’ ಎಂದು ಖುಷಿಯಿಂದ ಹೇಳಿದ್ದಾರೆ.