ಶನಿವಾರ, ಮೇ 21, 2022
22 °C

ಸೈಕಲ್‌ ಚಿತ್ರ ಪೋಸ್ಟ್‌ ಮಾಡಿ; ಸನ್ನಿ ಲಿಯೋನ್‌ ಟ್ವೀಟ್‌ ಮಾಡಿದ್ದು ಯಾಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಾಜಿ ನೀಲಿತಾರೆ ಹಾಗೂ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ದೇಶದಲ್ಲಿ ಪೆಟ್ರೋಲ್‌ ಏರಿಕೆಯಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸೈಕಲ್‌ನೊಂದಿಗೆ ಇರುವ ಚಿತ್ರವನ್ನು ಪೋಸ್ಟ್‌ ಮಾಡುವ ಮೂಲಕ ಪರೋಕ್ಷವಾಗಿ ಪ್ರತಿಭಟಿಸಿದ್ದಾರೆ. 

ಸೈಕಲ್‌ನೊಂದಿಗೆ ನಿಂತಿರುವ ತಮ್ಮ ಚಿತ್ರ ಹಂಚಿಕೊಂಡಿರುವ ಸನ್ನಿ ಲಿಯೋನ್, ‌‘ಪೆಟ್ರೋಲ್‌ ಕೊನೆಗೂ 100ರ ಗಡಿ ದಾಟಿಯೇ ಬಿಟ್ಟಿತು. ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ‘ ಎಂದು ಬರೆಯುವುದರ ಜೊತೆಗೆ 'ಹೊಸ ಗ್ಲಾಮರ್‌ನೊಂದಿಗೆ ಸೈಕ್ಲಿಂಗ್‌' ಎಂಬ ಟ್ಯಾಗ್ ಲೈನ್ ಹಾಕಿದ್ದಾರೆ.

ದೇಶದಲ್ಲಿ ಪೆಟ್ರೋಲ್‌ ಬೆಲೆ ಏರಿಕೆಯಾಗುತ್ತಿದ್ದರೂ ಯಾವ ಸೆಲೆಬ್ರಿಟಿಗಳು ಕೂಡ ಮಾತನಾಡುತ್ತಿಲ್ಲ, ಆದರೆ ಸನ್ನಿ ಲಿಯೋನ್‌ ಮಾತ್ರ ಧೈರ್ಯವಾಗಿ ಮಾತನಾಡಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌ ಬೆಲೆ ಏರಿಕೆಯಾಗಿದ್ದಾಗ ಹಲವು ಬಾಲಿವುಡ್‌ ನಟರು ಟೀಕೆ ವ್ಯಕ್ತಪಡಿಸಿದ್ದರು. ಆದರೆ ಈಗ ಪೆಟ್ರೋಲ್‌ ಬೆಲೆ ₹ 100 ದಾಟಿದ್ದರೂ ಯಾವ ಸೆಲೆಬ್ರಿಟಿಗಳು ಮಾತನಾಡುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಸನ್ನಿ ಲಿಯೋನ್‌  'ಕಾಟನ್‌ಪೇಟೆ' ಸಿನಿಮಾದಲ್ಲಿನ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು