ಮಂಗಳವಾರ, ಮಾರ್ಚ್ 9, 2021
32 °C

‘ಇದು ಕಡೇ ವಿಡಿಯೊ...’ ಆತ್ಮಹತ್ಯೆಗೆ ಯತ್ನಿಸಿದ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚೆನ್ನೈ: ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದು ನನ್ನ ಕೊನೆಯ ವಿಡಿಯೊವಾಗಿದ್ದು ನನ್ನ ಸಾವಿಗೆ ಸೀಮನ್‌ ಹಾಗೂ ಹರಿ ನಾಡರ್ ಅವರೇ ಕಾರಣ ಎಂದು ಹೇಳಿ ಮಾತ್ರೆಗಳನ್ನು ನುಂಗಿದ್ದಾರೆ. ಈ ವಿಡಿಯೊವನ್ನು ಫೇಸ್‌ಬುಕ್‌ಗೆ ಅಪ್ಲೋಡ್‌ ಮಾಡಿದ್ದಾರೆ.

ರಕ್ತದೊತ್ತಡ ನಿವಾರಣೆಗೆ ನೀಡಲಾಗುವ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ ಕಾರಣ ವಿಜಯಲಕ್ಷ್ಮೀ ಅವರ ಪ್ರಜ್ಞೆ ತಪ್ಪಿತ್ತು ಎನ್ನಲಾಗಿದ್ದು, ಅವರನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚೆನ್ನೈನ ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ನಾನು ಕನ್ನಡಿಗಳು ಎಂಬ ಕಾರಣಕ್ಕೆ ನನಗೆ ಬಹಳ ಕಿರುಕುಳ ನೀಡಲಾಗಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದ ಕಾರಣಕ್ಕೆ ನನ್ನನ್ನು ಅವಹೇಳನ ಮಾಡಲಾಗಗಿದೆ. ನನ್ನ ಜಾತಿಯ ಸೀಮನ್‌ ಮತ್ತು ಹರಿ ನಾಡರ್ ಮಾತನಾಡಿದ್ದಾರೆ. ‌ ನಾನು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವು ಅತಿ ದೊಡ್ಡ ಎಚ್ಚರಿಕೆಯಾಗಬೇಕು ಎಂದು ವಿಜಯಲಕ್ಷ್ಮಿ ತಮಿಳು ಮತ್ತು ಕನ್ನಡದಲ್ಲಿ ವಿಡಿಯೊ ಮಾಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು