ಬೀಜಿಂಗ್: ಚಿತ್ರಕಥೆ ಸಿದ್ಧಪಡಿಸಿದವರ ಆಲೋಚನೆಗೆ ಪೂರಕವಾದ ಚಿತ್ರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಚೀನಾದ ಮುಂಚೂಣಿಯ ಮನರಂಜನಾ ವೇದಿಕೆ iQIYI ಮತ್ತು ಆಸ್ಕರ್ ವಿಜೇತ ಛಾಯಾಚಿತ್ರಗ್ರಹಣ ತಜ್ಞ ಹಾಗೂ ನಿರ್ದೇಶಕ ಪೀಟರ್ ಪೌ ಅವರು ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಪೀಟರ್ ಪೌ X iQIYI ಎಐ ಥಿಯೇಟರ್’ ಅಭಿವೃದ್ಧಿಪಡಿಸಿದ್ದಾರೆ.

ಚಿತ್ರ ತಯಾರಿಕೆಗೆ ಹೊಸ ತಂತ್ರಜ್ಞಾನ ಅಳವಡಿಸುವ ಮೂಲಕ ಹೆಚ್ಚಿನ ಕೌಶಲದೊಂದಿಗೆ ವೃತ್ತಿಪರ ಚಲನಚಿತ್ರ ನಿರ್ಮಾಣಕ್ಕೆ ಈ ವೇದಿಕೆ ನೆರವಾಗಲಿದೆ. ಈ ವೇದಿಕೆ ಮೂಲಕ ಆಧುನಿಕ ರೀತಿಯಲ್ಲಿ ಭವಿಷ್ಯದ ಚಿತ್ರವನ್ನು ಕಥೆ ಮೂಲಕ ಕೇಳಲು ಸಾಧ್ಯ.

ಗೂಗಲ್ ಮತ್ತು ಬೈಟ್ಡಾನ್ಸ್ ಜತೆಗೂಡಿ ಜಾಗತಿಕ ಕಿರುಚಿತ್ರ ಸ್ಪರ್ಧೆಯನ್ನು iQIYI ಆಯೋಜಿಸಿತ್ತು. ಆ ಮೂಲಕ ವೃತ್ತಿಪರ ಮಟ್ಟದ ಚಲನಚಿತ್ರ ನಿರ್ಮಾಣವನ್ನು ಬೆಂಬಲಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಪ್ರತಿಭಾನ್ವೇಷಣೆಯನ್ನು ಈ ಕಂಪನಿ ನಡೆಸಿತ್ತು.

iQIYI ಕಂಟೆಂಟ್ ಅಧಿಕಾರಿ ಷಿಯಾಹೊಯಿ ವಾಂಗ್ ಅವರು ಮಾಹಿತಿ ನೀಡಿ, ‘ಕೃತಕ ಬುದ್ಧಿಮತ್ತೆ ಆಧಾರಿತ ಕಥೆ ಹೇಳುವ, ಆ ಮೂಲಕ ಸಿನಿಮಾವನ್ನು ಅತ್ಯದ್ಭುತವಾಗಿ ನಿರ್ಮಿಸುವ ವೇದಿಕೆಯನ್ನು ಪೀಟರ್ ಅವರ ಜತೆಗೂಡಿ ಕಂಪನಿ ಸಿದ್ಧಪಡಿಸಿದೆ. ಆ ಮೂಲಕ ಭವಿಷ್ಯದ ಮನರಂಜನಾ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸುವ ಯುವಜನತೆ ಮುಂಚೂಣಿಯಲ್ಲಿರಬೇಕು ಎಂಬುದು ನಮ್ಮ ಆಶಯ’ ಎಂದಿದ್ದಾರೆ.

ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದಲೇ ಕನಿಷ್ಠ 15 ನಿಮಿಷಗಳ ಎಐ ಚಿತ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ‘ಜರ್ನಿ ಟು ದ ವೆಸ್ಟ್‘, ‘ಜೆಂಡರ್ ಹ್ಯಾಪಿನೆಸ್ ಅಂಡ್ ಫೈತ್’, ‘ಟ್ರುಥ್’ ಎಂಬ ಮೂರು ಪರಿಕಲ್ಪನೆಯಲ್ಲಿ ಚಿತ್ರಕಥೆ ಸಿದ್ಧಪಡಿಸಿ ಅರ್ಜಿ ಸಲ್ಲಿಸಬಹುದು. ಅದಕ್ಕೆ ಪೂರಕವಾಗಿ ತಮ್ಮ ಆಲೋಚನೆಗಳನ್ನು ಅಂತರ್ಜಾಲತಾಣದಲ್ಲಿ (https://ppai.iqiyi.com) ಅ. 25ರವರೆಗೂ ಸಲ್ಲಿಸಬಹುದು.

ಮೂವತ್ತು ತಂಡಗಳನ್ನು ಸಿದ್ಧಪಡಿಸಲಾಗುವುದು. ಇವರಿಗೆ ಒಂದು ವಾರದ ವಸತಿ ಸಹಿತ ನಿರ್ದೇಶನ ಕಾರ್ಯಾಗಾರವನ್ನು ಪೀಟರ್ ನೇತೃತ್ವದ ತಂಡ ನೀಡಲಿದೆ. ಈ ತಂಡಗಳಿಂದ 15 ಯೋಜನೆಗಳು Peter Pau × iQIYI AI Theaterನಲ್ಲಿ ಸಿದ್ಧವಾಗಲಿವೆ. ಕಾರ್ಯಾಗಾರದಲ್ಲಿ ನಿರ್ಮಾಣ, ವಿತರಣೆ, ಪ್ರಚಾರ ವಿಷಯ ಕುರಿತೂ ತರಬೇತಿ ನೀಡಲಾಗುವುದು. ಕಾರ್ಯಾಗಾರದಲ್ಲಿ ಸಿದ್ಧಗೊಂಡ ಚಿತ್ರವು 2026ರ ಆರಂಭದಲ್ಲಿ ತೆರೆಕಾಣಲಿದೆ. ಈ ಚಿತ್ರದ ಲಾಭದಲ್ಲಿ ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಶೇ 30ರಷ್ಟು ಲಾಭಾಂಶ ಸಿಗಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೀಟರ್ ಪೌ, ‘ಸಾಂಪ್ರದಾಯಿಕ ಚಿತ್ರ ನಿರ್ಮಾಣ, ಕಥೆ ಹೇಳುವ ಪದ್ಧತಿಯಿಂದ ಮುಂದೆ ಸಾಗಬೇಕಿದೆ. ಇದಕ್ಕಾಗಿಯೇ ಕೃತಕ ಬುದ್ಧಿಮತ್ತೆ ಆಧಾರಿತ ಕಥೆ ಹೇಳುವ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿರುವವರು ತಮ್ಮ ಆಲೋಚನೆಗಳಿಗೆ ಹೊಸ ಸಾಧ್ಯತೆಯ ರೆಕ್ಕೆಗಳನ್ನು ಕಟ್ಟಬಹುದಾಗಿದೆ. ಆ ಮೂಲಕ ಭವಿಷ್ಯದ ಮನರಂಜನಾ ಕ್ಷೇತ್ರವನ್ನು ಸಿದ್ಧಪಡಿಸಬಹುದಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.