ಗುರುವಾರ , ಜೂನ್ 17, 2021
21 °C

ಆರ್‌ಆರ್‌ಆರ್‌ ಚಿತ್ರೀಕರಣಕ್ಕೆ ಮರಳಿದ ಅಜಯ್‌ ದೇವಗನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟ್ರಿಪಲ್‌ ಆರ್‌ (ಆರ್‌ಆರ್‌ಆರ್‌) ಚಿತ್ರ ತಂಡಕ್ಕೆ ಬಾಲಿವುಡ್‌ ನಟ ಅಜಯ್‌ ದೇವಗನ್ ಮರಳಿ ಬಂದಿದ್ದಾರೆ.

ಟ್ರಿಪಲ್‌ ಆರ್‌ ಚಿತ್ರದಲ್ಲಿ ಅಜಯ್‌ ಅವರದ್ದು ಪ್ರಮುಖ ಪಾತ್ರ ಇದೆ. ಇದರ ಮುಖ್ಯ ಭಾಗಗಳ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದಾರೆ. ಲಾಕ್‌ಡೌನ್‌ ಜಾರಿಗೆ ಬಂದಾಗ ಅಜಯ್‌ ಅವರು ಚಿತ್ರೀಕರಣದಿಂದ ವಾಪಸಾಗಿದ್ದರು. ಈಗ ಮರಳಿದ್ದು, ಉಳಿದ ಭಾಗಗಳನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ.

 2ರಲ್ಲಿ ಮಕ್ಕಿ (ತೆಲುಗಿನ ‘‌ಈಗ’ ಚಿತ್ರದ ಹಿಂದಿ ಅವತರಣಿಕೆ) ಚಿತ್ರಕ್ಕೆ ಕಂಠದಾನ (ವಾಯ್ಸ್‌ ಓವರ್‌) ನೀಡಲು ಕೋರಿ ನಿರ್ಮಾಪಕ ರಾಜಾಮೌಳಿ ಅವರು ಅಜಯ್‌ ದೇವಗನ್‌ ಮತ್ತು ಕಾಜೊಲ್‌ ಅವರನ್ನು ಭೇಟಿಯಾಗಿದ್ದರಂತೆ. ಚಿತ್ರಕ್ಕೆ ಈ ಜೋಡಿ ಕಂಠದಾನ ನೀಡಿತ್ತು. ೮ ವರ್ಷಗಳ ಅಂತರದ ಬಳಿಕ ಮತ್ತೆ ರಾಜಾಮೌಳಿ ಅವರ ಜೊತೆ ಅಜಯ್‌ ದೇವಗನ್‌ ಕೆಲಸ ಮಾಡುತ್ತಿದ್ದಾರೆ. 

ಅಜಯ್‌ ಅವರು ಈಗಾಗಲೇ ಹೈದರಾಬಾದ್‌ಗೆ ಬಂದಿದ್ದಾರೆ. ಸಿನಿಮಾ ಚಿತ್ರೀಕರಣ ಮುಂದುವರಿದಿದೆ. 

ಆರ್‌ಆರ್‌ಆರ್‌ ಚಿತ್ರದಲ್ಲಿ ದೇವಗನ್‌ ಅವರು ಶ್ರಿಯಾ ಶರಣ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದ ಫ್ಲ್ಯಾಷ್‌ಬ್ಯಾಕ್‌ ನಿರೂಪಣೆಯ ದೃಶ್ಯದಲ್ಲಿ ದೇವಗನ್‌ ಮತ್ತು ಶ್ರಿಯಾ ಅವರ ಪಾತ್ರವಿದೆ. ಅಲಿಯಾ ಭಟ್‌, ಒಲಿವಿಯಾ ಮೊರಿಸ್‌ ಅವರೂ ಕೂಡಾ ತಾರಾಗಣದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು