ಸೋಮವಾರ, ಅಕ್ಟೋಬರ್ 19, 2020
25 °C

ಬಾಲಿವುಡ್ ನಟ ಅಜಯ್ ದೇವಗನ್ ಸೋದರ, ನಿರ್ದೇಶಕ ಅನಿಲ್ ದೇವಗನ್ ಸಾವು

ಎಎನ್ಐ Updated:

ಅಕ್ಷರ ಗಾತ್ರ : | |

Anil Devgan

ನವದೆಹಲಿ: ನಟ ಅಜಯ್ ದೇವಗನ್ ಅವರ ಸಹೋದರ ಮತ್ತು ಚಲನಚಿತ್ರ ನಿರ್ದೇಶಕ ಅನಿಲ್ ದೇವಗನ್ (45) ಅವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ. 

ಅವರ ನಿಧನದ ಸುದ್ದಿಯನ್ನು ಅಜಯ್ ದೇವಗನ್ ಅವರೇ ಮಂಗಳವಾರ ಟ್ವೀಟರ್ ಪೋಸ್ಟ್ ಮೂಲಕ ದೃಢೀಕರಿಸಿದ್ದು, ತಮ್ಮ ಸಹೋದರನ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಕಳೆದ ರಾತ್ರಿ ನನ್ನ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡಿದ್ದೇನೆ. ಅವರ ಅಕಾಲಿಕ ನಿಧನವು ನಮ್ಮ ಕುಟುಂಬವನ್ನು ಎದೆಗುಂದಿಸಿದೆ. ಫಿಲ್ಮ್ ಕಂಪನಿ ಎಡಿಎಫ್ಎಫ್ ಮತ್ತು ನಾನು ಅವರ ಪ್ರೀತಿಯ ಉಪಸ್ಥಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು  ಪ್ರಾರ್ಥಿಸಿ. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಾವು ವೈಯಕ್ತಿಕ ಪ್ರಾರ್ಥನಾ ಸಭೆ ನಡೆಸುವುದಿಲ್ಲ ಎಂದು 51 ವರ್ಷದ ನಟ ಟ್ವೀಟ್ ಮಾಡಿದ್ದಾರೆ.

ಅನಿಲ್ ಅವರು, ಸೂಪರ್‌ ಸ್ಟಾರ್ ಸೋದರನಿಗಾಗಿ 'ರಾಜು ಚಾಚಾ' ಮತ್ತು 'ಬ್ಲಾಕ್‌ಮೇಲ್' ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಜಯ್ ತಂದೆ, ಬಾಲಿವುಡ್ ಸ್ಟಂಟ್ ನಿರ್ದೇಶದ ವೀರು ದೇವಗನ್ ಅವರು ಕಳೆದ ವರ್ಷ ಸಾವಿಗೀಡಾಗಿದ್ದರು. 

ಅಜಯ್ ಅವರ ಅಭಿಮಾನಿಗಳು ಕೂಡ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 

ನಿಮಗೆ ನನ್ನ ಪ್ರಾಮಾಣಿಕ ಸಂತಾಪಗಳು, ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. 'ಅನಿಲ್ ಗಾರು ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು ಸರ್... ದೇವರು ನಿಮ್ಮೆಲ್ಲರಿಗೂ ದುಃಖ ಭರಿಸುವ ಶಕ್ತಿ ನೀಡಲಿ' ಎಂದು ಮತ್ತೊಬ್ಬರು ಬರೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು