ಶನಿವಾರ, ಡಿಸೆಂಬರ್ 4, 2021
24 °C

‘ಓಹ್​ ಮೈ ಗಾಡ್​ 2’ ಪೋಸ್ಟರ್​ ಮೂಲಕ ಕುತೂಹಲ ಹೆಚ್ಚಿಸಿದ ಅಕ್ಷಯ್​ ಕುಮಾರ್​

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ಅಕ್ಷಯ್​ ಕುಮಾರ್ ​ಅಭಿನಯದ ‘ಓಹ್​ ಮೈ ಗಾಡ್​ 2’ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಸದ್ಯ ಚಿತ್ರದ ಪೋಸ್ಟರ್‌ ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಅಕ್ಷಯ್‌ ಕುಮಾರ್, ‘ಓಹ್​ ಮೈ ಗಾಡ್​ 2’ ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ. ಸಮಾಜದ ಒಂದು ಬಹುಮುಖ್ಯ ವಿಷಯದ ಮೇಲೆ ಬೆಳಕು ಚೆಲ್ಲುವ ನಮ್ಮ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಈ ಪಯಣದಲ್ಲಿ ಆದಿಯೋಗಿಯ ಆಶೀರ್ವಾದ ನಮ್ಮ ಮೇಲಿರಲಿ. ಹರ ಹರ ಮಹದೇವ್​’ ಎಂದು ಬರೆದುಕೊಂಡಿದ್ದಾರೆ.

ಇದೇ ಪೋಸ್ಟರ್‌ ಅನ್ನು ನಟಿ ಯಾಮಿ ಗೌತಮ್ ಹಂಚಿಕೊಂಡಿದ್ದು, ‘ಓಹ್​ ಮೈ ಗಾಡ್​ 2’ ಚಿತ್ರವನ್ನು ಘೋಷಿಸಲು ಸಂತೋಷವಾಗಿದೆ. ಚಿತ್ರಕ್ಕೆ ನಿಮ್ಮ ಆಶೀರ್ವಾದ ಬೇಕಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಅಮಿತ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ಯಾಮಿ ಗೌತಮ್​, ಪರೇಶ್​ ರಾವಲ್​ ಮುಂತಾದವರು ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು