ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ದಾಖಲಾದ ಆಲಿಯಾ ಭಟ್: ಮಗುವಿನ ನಿರೀಕ್ಷೆಯಲ್ಲಿ ರಣಬೀರ್ ಕಪೂರ್ ದಂಪತಿ

ಆಲಿಯಾ ಭಟ್ ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 6 ನವೆಂಬರ್ 2022, 5:20 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ ತಾರಾ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಆಲಿಯಾ ಭಟ್ ಅವರು ಭಾನುವಾರ ಬೆಳಗ್ಗೆ 7.30ಕ್ಕೆ ಮುಂಬೈನ ಎಚ್‌.ಎನ್. ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಲಿಯಾ ಅವರಿಗೆ ಭಾನುವಾರವೇ ಹೆರಿಗೆಯಾಗುವ ನಿರೀಕ್ಷೆಯಿದೆ. ರಣಬೀರ್–ಆಲಿಯಾ ದಂಪತಿಯ ಜತೆಗೆ ನೀತು ಕಪೂರ್, ಸೋನಿ ರಾಜಾನ್ ಮತ್ತು ಶಾಹೀನ್ ಭಟ್ ಕೂಡ ಆಸ್ಪತ್ರೆಗೆ ತೆರಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಯಾಗಿದ್ದಾರೆ. ಇತ್ತೀಚೆಗೆ ತಾವು ಗರ್ಭಿಣಿಯಾಗಿರುವುದಾಗಿ ಆಲಿಯಾ ಭಟ್ ಘೋಷಿಸಿದ್ದರು.

ಆಲಿಯಾ–ರಣಬೀರ್ ಮಗುವಿನ ನಿರೀಕ್ಷೆಯಲ್ಲಿರುವಂತೆಯೇ ಬಾಲಿವುಡ್‌ನಲ್ಲೂ ಸಂಭ್ರಮ ಮನೆಮಾಡಿದ್ದು, ಕುಟುಂಬದ ಆಪ್ತರು ಮತ್ತು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಶುಭಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT