ಗುರುವಾರ , ಅಕ್ಟೋಬರ್ 6, 2022
25 °C

ಬಾಲಕನ ಚಿತ್ರ ಹಂಚಿಕೊಂಡ ಆಲಿಯಾ...ರಣಬೀರ್‌ ಕಪೂರ್ ಜೆರಾಕ್ಸ್‌ ಎಂದ ನೆಟ್ಟಿಗರು!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಆಲಿಯಾ ಭಟ್‌, ರಣಬೀರ್‌ ಕಪೂರ್ ಬಾಲಿವುಡ್‌ನ ಪ್ರಖ್ಯಾತ ತಾರಾ ಜೋಡಿಯಾಗಿದ್ದಾರೆ. ಈ ದಂಪತಿಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇತ್ತೀಚೆಗೆ ಆಲಿಯಾ ಭಟ್‌ ಜಾಹೀರಾತಿನ ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಅದು ಮಕ್ಕಳ ಉಡುಪಿನ ಜಾಹೀರಾತು. ಅಲ್ಲಿ ಸುಮಾರು ಮಕ್ಕಳು ಸೇರಿದ್ದರು. ಅವರ ಚಿತ್ರಗಳನ್ನು ಆಲಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಅಲ್ಲಿ ಹಸಿರು ಬಣ್ಣದ ಟೀಶರ್ಟ್‌ ತೊಟ್ಟಿದ್ದ ಬಾಲಕ ಸ್ವಲ್ಪ ರಣಬೀರ್ ಕಪೂರ್‌ನಂತೆ ಕಾಣುತ್ತಿದ್ದ. ಇದನ್ನು ಗಮನಿಸಿಯೇ ಆಲಿಯಾ  ಆ ಚಿತ್ರವನ್ನು ಶೇರ್‌ ಮಾಡಿದ್ದರು. 

ಬಾಲಕನ ಚಿತ್ರ ನೋಡಿದ ಅಭಿಮಾನಿಗಳು ಕಾಮೆಂಟ್‌ಗಳ ಮಳೆಯನ್ನೇ ಸುರಿಸಿದ್ದಾರೆ. ಇಷ್ಟೊಂದು ಕಾಮೆಂಟ್‌ಗಳು ಬರುತ್ತವೆ ಎಂದು ಆಲಿಯಾ ಕೂಡ ಊಹೆ ಮಾಡಿರಲಿಲ್ಲವಂತೆ! ಆ ಮಗು ರಣಬೀರ್‌ನಂತೆಯೇ ಕಾಣುತ್ತದೆ ಎಂದು ಕೆಲವರು ಬರೆದಿದ್ದಾರೆ. ಮತ್ತೆ ಕೆಲವರು ಆ ಬಾಲಕ ರಣಬೀರ್‌ ಕಾಪಿ, ರಣಬೀರ್‌ ಜೆರಾಕ್ಸ್‌ ಎಂದು ಕಾಮೆಂಟ್‌ ಮಾಡಿದ್ದಾರೆ. 

ಈ ಬಾಲಕನನ್ನು ನೋಡಿದರೆ ತಕ್ಷಣಕ್ಕೆ ರಣಬೀರ್ ಕಪೂರ್ ಎಂದೇ ಭಾಸವಾಗುತ್ತದೆ ಎಂದೊಬ್ಬರು ಟೈಪಿಸಿದ್ದಾರೆ. ಈ ಫೋಟೊವನ್ನು ನೋಡಿದರೆ ಇದು ರಣಬೀರ್ ಕಪೂರ್ ತರಹ ಇದೆ ಎಂದು ನಿಮಗೆ ಅನಿಸುತ್ತಿಲ್ಲವೇ ಎಂದು ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ₹200 ಕೋಟಿ ವಂಚನೆ ಪ್ರಕರಣ: ನಟಿ ಜಾಕ್ವೆಲಿನ್ ಆರೋಪಿ, ಇಂದು ಚಾರ್ಜ್ ಶೀಟ್ ಸಲ್ಲಿಕೆ

ಇಂತಹ ಯಾವುದೇ ಕಾಮೆಂಟ್‌ಗಳಿಗೆ ತಲೆಕೆಡಿಸಿಕೊಳ್ಳದೇ ಆಲಿಯಾ, ಅಭಿಮಾನಿಗಳ ಬರಹ ನೋಡಿ ಮಸ್ತ್ ಎಂಜಾಯ್‌ ಮಾಡುತ್ತಿದ್ದಾರೆ ಎಂದು ಅವರ ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುವ ಮ್ಯಾನೇಜರ್‌ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಬಿಪಾಶಾ ಬಸು: ‘ಬೇಬಿ ಬಂಪ್‘ ಫೋಟೊ ಹಂಚಿಕೊಂಡ ನಟಿ

ಈ ಜೋಡಿಯ 'ಬ್ರಹ್ಮಾಸ್ತ್ರ' ಚಿತ್ರ ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೇಲೆ ದಂಪತಿ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರಣಬೀರ್ ಕಪೂರ್ ಅವರ 'ಶಂಶೇರಾ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

ಇವುಗಳನ್ನೂ ಓದಿ

ಧನಂಜಯ್‌, ರಚಿತಾ ನಟನೆಯ ‘ಮಾನ್ಸೂನ್‌ ರಾಗ’ ರಿಲೀಸ್‌ ಮುಂದಕ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು