ಬುಧವಾರ, ಜೂನ್ 29, 2022
26 °C

ಆಲಿಯಾ ಭಟ್ ಈಗ ಗಂಗೂಬಾಯಿ ಕಾಠಿಯಾವಾಡಿ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Alia Bhatt

ಬೆಂಗಳೂರು: ಬಾಲಿವುಡ್‌ನಲ್ಲಿ ವಿಶಿಷ್ಟವಾದ ಕಥೆಯನ್ನು ಹೊಂದಿರುವ ಪಾತ್ರಗಳನ್ನು ಮಾಡುವುದರಲ್ಲಿ ನಟಿ ಆಲಿಯಾ ಭಟ್ ನಿಸ್ಸೀಮರು..

ಆಲಿಯಾ ಭಟ್ ನಟನೆಯ ಹೊಸ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ‘ ಪೋಸ್ಟರ್ ಬಿಡುಗಡೆಯಾಗಿದೆ.

ಹೊಸ ಲುಕ್‌ನಲ್ಲಿ, ಶ್ವೇತವಸ್ತ್ರಧಾರಿಯಾಗಿ, ಹಣೆಗೆ ಕುಂಕುಮ ಧರಿಸಿದ ಫೋಟೊ ಇರುವ ಗಂಗೂಬಾಯಿಯ ಪೋಸ್ಟರ್ ಅನ್ನು ಆಲಿಯಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಫೆಬ್ರುವರಿ 25ರಂದು ಈ ಸಿನಿಮಾ ತೆರೆಕಾಣುತ್ತಿದೆ. ಶುಕ್ರವಾರ, ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದೆ.

ಗಂಗೂ ಬರುತ್ತಿದ್ದಾಳೆ ಎನ್ನುವ ಅಡಿಬರಹದೊಂದಿಗೆ, ಗಂಭೀರವಾದ ಲುಕ್ ಹೊಂದಿರುವ ಆಲಿಯಾ ಹೊಸ ಅವತಾರ, ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು