ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ʻಪುಷ್ಪʼ ಆಗಸ್ಟ್ 13ಕ್ಕೆ ಬಿಡುಗಡೆಯಾಗುವುದು ಪಕ್ಕಾ ಆಗಿದೆ.

ಅಲ್ಲು ಅರ್ಜುನ್, ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಹ್ಯಾಟ್ರಿಕ್ ಕಾಂಬಿನೇಶನ್‌ನಲ್ಲಿ ಮೈತ್ರಿ ಮೂವಿ ಮೇಕರ್ಸ್, ಮುತ್ತಂಶೆಟ್ಟಿ ಮೀಡಿಯಾ ಜಂಟಿ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷೆಯ ಚಿತ್ರವಿದು.

‘ಅಲ ವೈಕುಂಠಪುರಂಲೋ’ ಮತ್ತು ‘ರಂಗಸ್ಥಳಂ’ನಂತಹ ಸೂಪರ್ ಹಿಟ್ ಚಿತ್ರಗಳ ನಂತರ ಅಲ್ಲು ಅರ್ಜುನ್, ಸುಕುಮಾರ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ದೊಡ್ಡ ಬಜೆಟ್‌ನ ಪ್ಯಾನ್ ಇಂಡಿಯಾ ಚಿತ್ರ ಅಭಿಮಾನಿಗಳಲ್ಲೂ ಭಾರಿ ನಿರೀಕ್ಷೆ ಮೂಡಿಸಿದೆ.

ಈಗಾಗಲೇ ಬಿಡುಗಡೆಯಾದ ‘ಪುಷ್ಪ’ ಚಿತ್ರದ ಫಸ್ಟ್ ಲುಕ್‌ಗೆ ಅಭಿಮಾನಿಗಳಿಂದಲೂ ಭರ್ಜರಿ ಪ್ರತಿಸ್ಪಂದನೆ ಸಿಕ್ಕಿದೆ. ಸದ್ಯ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ಮನ್ಯ ಪ್ರದೇಶದ ಮಾರೆಡಿಪಲ್ಲಿ ಅರಣ್ಯಪ್ರದೇಶದಲ್ಲಿ ‘ಪುಷ್ಪ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಅಲ್ಲು ಅರ್ಜುನ್ ಪವರ್‌ಫುಲ್, ರಫ್ ಅಂಡ್ ಟಫ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆ ಮಾಡಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ಲಕ್ಕಿ ಬ್ಯೂಟಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ:‘ಸಲಾರ್’ ಚಿತ್ರತಂಡ ಸೇರಲಿದ್ದಾರೆ ನಟಿ ಶ್ರುತಿ ಹಾಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.