ಹುಟ್ಟುಹಬ್ಬದ ದಿನವೇ ಘೋಷಣೆಯಾಯ್ತು ಅಲ್ಲು ಅರ್ಜುನ್‌ ಹೊಸ ಚಿತ್ರ

ಶನಿವಾರ, ಏಪ್ರಿಲ್ 20, 2019
29 °C

ಹುಟ್ಟುಹಬ್ಬದ ದಿನವೇ ಘೋಷಣೆಯಾಯ್ತು ಅಲ್ಲು ಅರ್ಜುನ್‌ ಹೊಸ ಚಿತ್ರ

Published:
Updated:

ಹೈದರಾಬಾದ್: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್‌ ಅವರಿಗೆ ಇಂದು 36ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ದಿನದಂದೇ ಅವರ ಹೊಸ ಚಿತ್ರವೊಂದು ಘೊಷಣೆಯಾಗಿದೆ.  

‘ಶ್ರೀ ವೆಂಕಟೇಶ್ವರ ಕ್ರಿಯೇಷನ್‌’ ಬ್ಯಾನರ್‌ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಶ್ರೀರಾಮ್‌ ವೇಣು ಅವರು ನಿರ್ದೇಶಿಸುತ್ತಿದ್ದಾರೆ. ಅಂದ ಹಾಗೆ ಆ ಚಿತ್ರದ ಹೆಸರು ‘ಐಕಾನ್’.  ವೆಂಕಟೇಶ್ವರ ಕ್ರಿಯೇಷನ್‌ ಸಂಸ್ಥೆ ಇಂದು ಟ್ವೀಟ್‌ ಮಾಡಿ ಈ ವಿಚಾರವನ್ನು ಬಹಿರಂಗಗೊಳಿಸಿದೆ. ಚಿತ್ರದ ತಾರಾಗಣ ಮತ್ತು ಇತರ ಮಾಹಿತಿಗಳನ್ನು ನಿರ್ದೇಶಕ ಶ್ರೀರಾಮ್‌ ವೇಣು ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎನ್ನಲಾಗಿದೆ. 

‘ನಾ ಇಲ್ಲು ಇಂಡಿಯಾ’ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ ಅವರು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿದ್ದಾರೆ. ಅದಕ್ಕಾಗಿಯೇ ‘ಐಕಾನ್‌’ ಚಿತ್ರಕ್ಕೆ ಸಾಕಷ್ಟು ಸಮಯ ತೆಗೆದುಕೊಂಡು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ವಾತಾವರಣ ಇಷ್ಟ: ನಟ ಅಲ್ಲು ಅರ್ಜುನ್‌​

ಈ ಮೊದಲು ನಿರ್ದೇಶಕ ವಿಕ್ರಮ್‌ ಕುಮಾರ್‌ ಅವರೊಂದಿಗೆ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ವಿಕ್ರಮ್‌ ಅವರು ಈಗಾಗಲೇ ‘24’, ‘ಹೆಲೋ’, ‘ಇಷ್ಕ್‌’, ‘ಮನಮ್‌’ ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ. ಆದರೆ, ಉದ್ದೇಶಿತ ಚಿತ್ರದ ಕುರಿತು ಯಾವುದೇ ಮಹತ್ತರ ಮಾತುಕತೆಗಳು ನಡೆಯಲಿಲ್ಲ ಎಂದು ಅಲ್ಲು ಅರ್ಜುನ್‌ ಆಪ್ತ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ‘ನಾ ಪೇರು ಸೂರ್ಯ’: ಖಡಕ್‌ ಮಿಲಿಟರಿ ಅಧಿಕಾರಿಯಾಗಿ ಅಲ್ಲು ಅರ್ಜುನ್​

ಹಿಟ್‌ ಚಿತ್ರ ‘ಆರ್ಯ’ ಮೂಲಕ ತೆಲುಗು ಚಿತ್ರರಂಗ ಪರವೇಶಿಸಿದ ಅಲ್ಲು ಅರ್ಜುನ್‌ ಅವರು  ‘ಐಕಾನ್’ ಚಿತ್ರಕ್ಕೂ ಮೊದಲು ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಮತ್ತು ಸುಕುಮಾರ್‌ ಅರೊಂದಿಗೆ ಸಿನಿಮಾ ಮಾಡಲಿದ್ದಾರೆ. ಮುಂದಿನ ಮಾರ್ಚ್‌ ಅಂತ್ಯಕ್ಕೆ ಅವರು ತ್ರಿವಿಕ್ರಮ್‌ ಅವರ ಚಿತ್ರದ ಶೂಟಿಂಗ್‌ ಆಂಭಿಸಲಿದ್ದಾರೆ. ನಂತರ ‘ಆರ್ಯ’ ಚಿತ್ರದ ನಿರ್ದೇಶಕ ಸುಕುಮಾರ್‌ ಅವರ ಜತೆಗಿನ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಳ್ಳಲಿದ್ದಾರೆ. ಇದಾದ ನಂತರ ‘ಐಕಾನ್’ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ. 

‘ಐಕಾನ್’ ಚಿತ್ರದ ನಿರ್ದೇಶಕ ಶ್ರೀರಾಮ್‌ ವೇಣು ಅವರು ಈಗಾಗಲೇ ‘ಮಿಡ್ಲ್‌ ಕ್ಲಾಸ್ ಅಬ್ಬಾಯಿ (ಎಂಸಿಎ)’ ಚಿತ್ರ ನಿರ್ದೇಶಿಸಿದ್ದಾರೆ. 

ಇದನ್ನೂ ಓದಿ: ದೇಶಾಭಿಮಾನದ ಪ್ರಜ್ವಲಿಸುವ 'ಸೂರ್ಯ'​

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !