ಸೋಮವಾರ, ಜುಲೈ 4, 2022
21 °C

ಬ್ರೇಕಪ್ ವದಂತಿ: ಸಿಂಗಲ್‌ ಫೋಟೊ ಹಂಚಿಕೊಂಡ ಸಿದ್ಧಾರ್ಥ್ -ಕಿಯಾರಾ ಜೋಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ‘ಶೇರ್‌ಷಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿ ಮತ್ತೆ ಸುದ್ದಿಯಲಿದೆ.

ಹೌದು ಈ ಬಾರಿ ಸುದ್ದಿಯಲ್ಲಿರುವುದು ಹೊಸ ಸಿನಿಮಾ ವಿಚಾರದಿಂದಲ್ಲ. ಸಿದ್ಧಾರ್ಥ್ –ಕಿಯಾರಾ ಜೋಡಿ ‘ಬ್ರೇಕಪ್’ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಕೇಳಿಬಂದಿದ್ದವು. 

ಸಿದ್ಧಾರ್ಥ್ –ಕಿಯಾರಾ ಏರ್‌ಪೋರ್ಟ್‌ ಹಾಗೂ ರೆಸ್ಟೋರೆಂಟ್‌ನಿಂದ ಒಟ್ಟಿಗೆ ಹೊರಬರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. 

ಓದಿ... ಡಾ.ರಾಜ್‌ಕುಮಾರ್ ಜನ್ಮದಿನ: ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

ಸಿದ್ಧಾರ್ಥ್ ಮಲ್ಹೋತ್ರಾ ಅವರು ಕಿಯಾರಾ ಜತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬ್ರೇಕಪ್ ವಿಚಾರ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. 

ಇದೀಗ ಇವರಿಬ್ಬರೂ ಪ್ರತ್ಯೇಕವಾಗಿ ಪ್ರವಾಸದ ವೇಳೆ ಕ್ಲಿಕ್ಕಿಸಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

ಓದಿ...​ PHOTOS | 94ನೇ ಜನ್ಮದಿನ ಸಂಭ್ರಮ: ಅಪರೂಪ ಚಿತ್ರಗಳಲ್ಲಿ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್

‘ಸೂರ್ಯನಿಲ್ಲದ ದಿನ ರಾತ್ರಿಯಂತೆ ಎಂಬುದು ನಿಮಗೆ ತಿಳಿದಿದೆ’ -ಸ್ಟೀವ್ ಮಾರ್ಟಿನ್ ಎಂದು ಸಿದ್ಧಾರ್ಥ್ ಮಲ್ಹೋತ್ರಾ ಬರೆದಿದ್ದಾರೆ. 

‘ನಗುವನ್ನು ನೆಡಿ, ನಗುವನ್ನು ಬೆಳೆಸಿ, ಪ್ರೀತಿಯನ್ನು ಇಮ್ಮಡಿಗೊಳಿಸಿ’ ಎಂದು ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಿರುವ ಸುಂದರವಾದ ಚಿತ್ರವನ್ನು ಕಿಯಾರಾ ಪೋಸ್ಟ್ ಮಾಡಿದ್ದಾರೆ. 

ಕಿಯಾರಾ, ವರುಣ್ ಧವನ್ ಜೊತೆಗೆ ‘ಜಗ್ ಜಗ್ ಜೀಯೋ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ ‘ಗೋವಿಂದಾ ನಾಮ್ ಮೇರಾ’ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆಯಲ್ಲಿ ಅಭಿನಯಿಸಲಿದ್ದಾರೆ.

ಓದಿ...  49ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್: ಅಭಿಮಾನಿಗಳಿಂದ ಶುಭ ಹಾರೈಕೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು