ಭಾನುವಾರ, ಫೆಬ್ರವರಿ 23, 2020
19 °C
‘ಫೈಟರ್’ಗೆ ಅನನ್ಯಾ ಜೋಡಿ

ಟಾಲಿವುಡ್‌ಗೆ ಅನನ್ಯಾ ಎಂಟ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ಬೆಡಗಿ ಮತ್ತು ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ, ಪುರಿ ಜಗನ್ನಾಥ ಅವರ ಸಿನಿಮಾ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ.

ಪುರಿ ಜಗನ್ನಾಥ್‌ ನಿರ್ದೇಶನದ ‘ಫೈಟರ್‌’ ಚಿತ್ರದ ನಾಯಕ ವಿಜಯ್‌ ದೇವರಕೊಂಡ ಜತೆ ಜಾಹ್ನವಿ ಕಪೂರ್‌ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತು. ಇದೀಗ ಬಂದ ಹೊಸ ಸುದ್ದಿ ಎಂದರೆ ಜಾಹ್ನವಿ ಜಾಗವನ್ನು ಅನನ್ಯಾ ತುಂಬುತ್ತಿದ್ದಾಳೆ ಎನ್ನುವುದು.

ಅನನ್ಯಾ ಪಾಂಡೆ ಫೈಟರ್‌ ಜೋಡಿಯಾಗುತ್ತಿದ್ದಾಳೆ ಎಂಬ ವರದಿಗಳು ಟಾಲಿವುಡ್‌ನಲ್ಲಿ ಹರಿದಾಡುತ್ತಿವೆ. ಒಂದು ವೇಳೆ ಅದು ನಿಜವಾದರೆ ‘ಫೈಟರ್‌’ ಅನನ್ಯಾ ಮೊದಲ ಚಿತ್ರವಾಗಲಿದೆ. 

ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಜಾಹ್ನವಿ ಕಪೂರ್‌ ನಾಯಕಿ ಎಂದು ಈ ಹಿಂದೆ ಸುದ್ದಿಯಾಗಿತ್ತು. ₹3.5 ಕೋಟಿ ಸಂಭಾವನೆಯನ್ನೂ ಜಾಹ್ನವಿ ಪಡೆಯುತ್ತಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ತಮ್ಮ ಬ್ಯುಸಿ ಶೆಡ್ಯೂಲ್‌ನಿಂದಾಗಿ ಈ ಚಿತ್ರಕ್ಕೆ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ. ಅವರು ಎರಡು– ಮೂರು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಈ ಚಿತ್ರಕ್ಕೆ ಡೇಟ್ಸ್‌ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರು ಈ ಚಿತ್ರವನ್ನು ಒಪ್ಪಿಕೊಂಡಿಲ್ಲ ಎಂದು ಅವರ ಆಪ್ತಮೂಲಗಳು ತಿಳಿಸಿವೆ.

ಈ ಚಿತ್ರಕ್ಕೆ ನಾಯಕಿ ಸ್ಥಾನಕ್ಕೆ ಅನನ್ಯಾ ಪಾಂಡೆಯನ್ನು ಭೇಟಿ ಮಾಡಿ ಪುರಿ ಜಗನ್ನಾಥ್‌ ಮಾತುಕತೆ ನಡೆಸಿದ್ದಾರೆ. ಆಕೆ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿವೆ. ‘ಫೈಟರ್‌’ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿವೆ. ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಅನನ್ಯಾ ನಟಿಸಿರುವ ‘ಸ್ಟೂಡೆಂಟ್‌ ಆಫ್‌ ದಿ ಇಯರ್‌ 2’ ಹಾಗೂ ‘ಪತಿ, ಪತ್ನಿ ಔರ್‌ ವೋ’ ಎರಡೂ ಚಿತ್ರಗಳು ಬಾಕ್ಸ್‌ ಆಫೀಸಿನಲ್ಲಿ ಹಿಟ್‌ ಗಳಿಸಿವೆ. ಹಾಗಾಗಿ ಅನೇಕ ಸಿನಿಮಾಗಳ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬರುತ್ತಿದ್ದರೂ, ಸಿನಿಮಾ ಆಯ್ಕೆ ವಿಷಯದಲ್ಲಿ ಅವರು ಬಲು ಚ್ಯೂಸಿಯಂತೆ.  ‘ಫೈಟರ್‌’ ಜೊತೆಗೆ ಇಶಾನ್‌ ಖಟ್ಟರ್‌ ನಾಯಕನಾಗಿ ನಟಿಸುತ್ತಿರುವ ‘ಖಾಲಿ ಪೀಲಿ’ ಚಿತ್ರದಲ್ಲೂ ನಾಯಕಿಯಾಗಿ ಅನನ್ಯಾ ನಟಿಸುತ್ತಿದ್ದಾರೆ. ಈಗಾಗಲೇ ದಕ್ಷಿಣದಲ್ಲೂ ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಈ ಚಿತ್ರವೂ ಅವರಿಗೆ ಜನಪ್ರಿಯತೆಯನ್ನು ತಂದುಕೊಡಲಿದೆ ಎಂಬ ಗಾಳಿಸುದ್ದಿ ಬಿ–ಟೌನ್‌ನಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು