ವಿನಯ್ ರಾಜ್ಕುಮಾರ್, ಅದಿತಿ ಪ್ರಭುದೇವ ಹಾಗೂ ನಿಶಾ ರವಿಕೃಷ್ಣನ್ ನಟಿಸಿರುವ, ಕೀರ್ತಿ ಕೃಷ್ಣ ನಿರ್ದೇಶನದ ‘ಅಂದೊಂದಿತ್ತು ಕಾಲ’ ಸಿನಿಮಾ ಆ.29ರಂದು ಬಿಡುಗಡೆಯಾಗಲಿದೆ.

90ರ ಕಾಲಘಟ್ಟದ ಪ್ರೇಮಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ಭುವನ್ ಸಿನಿಮಾಸ್ ಮೂಲಕ ಭುವನ್ ಸುರೇಶ್ ನಿರ್ಮಾಣ ಮಾಡಿದ್ದಾರೆ. ಧನಂಜಯ್ ರಂಜನ್ ಸಾಹಿತ್ಯದಲ್ಲಿ ಮೂಡಿಬಂದಿರುವ ಸಿನಿಮಾದ ‘ಮುಂಗಾರು ಮಳೆಯಲ್ಲಿ...’ ಹಾಡು ಈಗಾಗಲೇ ಪ್ರೇಕ್ಷಕರನ್ನು ಸೆಳೆದಿದ್ದು, ಸಿದ್ ಶ್ರೀರಾಮ್ ದನಿಗೆ ಮನಸೋತಿದ್ದಾರೆ.

ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇದೊಬ್ಬ ನಿರ್ದೇಶಕನ ಜೀವನದ ಕಥೆಯಾಗಿದೆ ಎಂದಿದೆ ಚಿತ್ರತಂಡ. ಅತಿಥಿ ಪಾತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿದ್ದು, ಅರುಣಾ ಬಾಲರಾಜ್, ಜಗಪ್ಪ ಸೇರಿದಂತೆ ಅನೇಕ ಕಲಾವಿದರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆಯನ್ನು ಕೀರ್ತಿ ಕೃಷ್ಣ ಅವರೇ ಬರೆದಿದ್ದು, ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣ ನಡೆದಿದೆ. ಅಭಿಷೇಕ್ ಕಾಸರಗೋಡು ಛಾಯಾಚಿತ್ರಗ್ರಹಣ, ವಿ.ರಾಘವೇಂದ್ರ ಸಂಗೀತ, ಎ.ಆರ್.ಕೃಷ್ಣ, ಸುರೇಶ್ ಆರ್ಮುಗಂ ಸಂಕಲನ, ರವಿವರ್ಮ ಸಾಹಸ, ರಘು ಆರ್.ಜೆ. ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.