ಶುಕ್ರವಾರ, ಫೆಬ್ರವರಿ 21, 2020
25 °C

‘ಅಂಗ್ರೇಜಿ ಮೀಡಿಯಂ’ ಟ್ರೇಲರ್‌ ರಿಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಇರ್ಫಾನ್‌ ಖಾನ್‌, ಕರೀನಾ ಕಪೂರ್‌ ಮತ್ತು ರಾಧಿಕಾ ಮದನ್‌ ನಟಿಸಿರುವ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾ ‘ಅಂಗ್ರೇಜಿ ಮೀಡಿಯಂ’ ಟ್ರೇಲರ್‌ ಬಿಡುಗಡೆಯಾಗಿದೆ. ಎರಡು ನಿಮಿಷ ಐವತ್ತೈದು ಸೆಕೆಂಡ್‌ ಅವಧಿಯ ಟ್ರೇಲರ್‌ ಅನ್ನು ಎರಡೂವರೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದಾರೆ.

ಆರ್‌ಟಿಇ ಅಡಿ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಪಡೆಯುವ ಮಕ್ಕಳು ಮತ್ತವರ ಪೋಷಕರು ಪಡುವ ಪಡಿಪಾಟಲುಗಳ ಕತೆ ಆಧಾರಿತ ‘ಹಿಂದಿ ಮೀಡಿಯಂ’ ಸಿನಿಮಾ ಹಿಟ್‌ ಆಗಿತ್ತು. ಈ ಸಿನಿಮಾದ ಯಶಸ್ಸಿನಿಂದ ಪ್ರೇರಿತರಾಗಿ ‘ಅಗ್ರೇಜಿ ಮೀಡಿಯಂ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದಲ್ಲೂ ಪ್ರಧಾನ ಪಾತ್ರದಲ್ಲಿ ಇರ್ಫಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ, ಇರ್ಫಾನ್ ಪತ್ನಿಯಾಗಿ ರಾಧಿಕಾ ಮದನ್ ಅಭಿನಯಿಸುತ್ತಿದ್ದಾರೆ. ಕರೀನಾ ಕಪೂರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ವಿಶೇಷ. ಹೋಮಿ ಅದಾಜಾನಿಯಾ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ತಂದೆ, ತನ್ನ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಲುವಾಗಿ ನಡೆಸುವ ಹೋರಾಟದ ಪಯಣವೇ ಈ ಸಿನಿಮಾದ ಕಥಾ ವಸ್ತು. ಈ ಕಥೆಯನ್ನು ನಿರೂಪಿಸುತ್ತಲೇ ಅಪ್ಪ ಮಗಳ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ತೋರಿಸಲಾಗಿದೆಯಂತೆ.

ಟ್ರೇಲರ್‌ಗೆ ಫಿದಾ ಅಗಿರುವ ನೆಟ್ಟಿಗರು ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

‘ಹಿಂದಿ ಮೀಡಿಯಂ’ ಸಿನಿಮಾ ಚೆನ್ನಾಗಿತ್ತು. ಹೀಗಾಗಿ, ಈ ಸಿನಿಮಾ ಬಗ್ಗೆಯೂ ತುಂಬಾ ನಿರೀಕ್ಷೆ ಇದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ಕೆಲವರು ಟ್ರೇಲರ್‌ನಲ್ಲಿ ಇರ್ಫಾನ್‌ ಖಾನ್‌ ಮತ್ತು ರಾಧಿಕಾ ಮೆನನ್ ನಟನೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೃದಯಕ್ಕೆ ತಟ್ಟುವಂತಹ ಸಿನಿಮಾ ನೀಡಿರುವ ಚಿತ್ರತಂಡದ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)