ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಿಮಲ್‌’ ಹೊಸ ಪೋಸ್ಟರ್‌ ಬಿಡುಗಡೆ: ಗೃಹಿಣಿಯಾಗಿ ರಶ್ಮಿಕಾ ಮಂದಣ್ಣ

Published 26 ಸೆಪ್ಟೆಂಬರ್ 2023, 7:48 IST
Last Updated 26 ಸೆಪ್ಟೆಂಬರ್ 2023, 8:28 IST
ಅಕ್ಷರ ಗಾತ್ರ

ಬಾಲಿವುಡ್ ನಟ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್‌’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದ್ದು, ಗೃಹಿಣಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಮಿಂಚಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶನದ ಈ ಚಿತ್ರದಲ್ಲಿ ಅನಿಲ್‌ ಕಪೂರ್‌, ಬಾಬಿ ದೇವೊಲ್‌ ಸೇರಿದಂತೆ ಹಲವು ಪ್ರಮುಖ ನಟ–ನಟಿಯರು ಕಾಣಿಸಿಕೊಂಡಿದ್ದಾರೆ. ಇಂದು ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ ಪ್ರಮುಖ ಪಾತ್ರಗಳ ಸರಳ ಪರಿಚಯ ಮಾಡಿಕೊಡಲಾಗಿದೆ.

ಬಾಬಿ ದೇವೊಲ್‌ ಅವರು ಈ ಚಿತ್ರದಲ್ಲಿ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮುಖದ ತುಂಬಾ ರಕ್ತ ಲೇಪಿಸಿಕೊಂಡಿರುವ ಅವರ ಪೋಸ್ಟರ್‌ ಬಿಡುಗಡೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೋಸ್ಟರ್‌ ಹಂಚಿಕೊಂಡಿರುವ ದೇವೊಲ್‌, ‘ಪ್ರಾಣಿಗಳ ಶತ್ರು’ ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಚಿತ್ರದಲ್ಲಿ ಸರಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಣಬೀರ್‌ ಪತ್ನಿಯಾಗಿ ತೆರೆಯ ಮೇಲೆ ಬರಲಿದ್ದಾರೆ. ಕಡಿಮೆ ಮೇಕಪ್‌, ಸರಳ ಸೀರೆಯಲ್ಲಿ ಸಾಮಾನ್ಯ ಗೃಹಿಣಿಯಾಗಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ ಹಂಚಿಕೊಂಡಿರುವ ರಶ್ಮಿಕಾ ‘ನಿಮ್ಮ ಗೀತಾಂಜಲಿ’ ಎಂದಷ್ಟೇ ಬರೆದುಕೊಂಡಿದ್ದಾರೆ.

ರಣಬೀರ್‌ ಒಬ್ಬ ಹೋರಾಟಗಾರನಾಗಿ ಚಿತ್ರದಲ್ಲಿ ಕಾಣಿಸಿಕೊಂಡರೆ, ಅನಿಲ್‌ ಕಪೂರ್ ರಣಬೀರ್‌ ತಂದೆಯ ಪಾತ್ರದಲ್ಲಿ ಮಿಂಚಲಿದ್ದಾರೆ.

ಇದೇ ಡಿಸೆಂಬರ್‌ 1ಕ್ಕೆ ಚಿತ್ರ ತೆರೆಯ ಮೇಲೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT