ಶನಿವಾರ, ಏಪ್ರಿಲ್ 1, 2023
23 °C

ಬಿಡುಗಡೆಯ ಹಾದಿಯಲ್ಲಿ ‘ಅನಿರೀಕ್ಷಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅನಿರೀಕ್ಷಿತ’ ಎಂಬ ಶೀರ್ಷಿಕೆಯ ಎರಡೇ ಪಾತ್ರಗಳಿರುವ ವಿಭಿನ್ನ ಸಿನಿಮಾವೊಂದು ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರಕ್ಕೆ ಮಿಮಿಕ್ರಿ ದಯಾನಂದ್‌ ಅವರ ಪ್ರಧಾನ ಪಾತ್ರ ಹಾಗೂ ನಿರ್ದೇಶನವಿದೆ. ಅದೂ ಅವರಿಗೆ ಅನಿರೀಕ್ಷಿತವೇ ಅಂತೆ. ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಗಿದೆ. ಮಂಗಳೂರು ಹಾಗೂ ಕೇರಳದ ಕೆಲವು ಪ್ರದೇಶಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ.

ಸಮುದ್ರ ತೀರದ ಮನೆಯೊಂದರಲ್ಲಿ ಹೆಚ್ಚು ದಿನದ ಚಿತ್ರೀಕರಣ ನಡೆದಿತ್ತು. ಲಾಕ್‌ಡೌನ್ ಸಮಯವಾದುದ್ದರಿಂದ ಯಾರು ಆಚೆ ಹೋಗುವಂತಿರಲಿಲ್ಲ. ಅಡುಗೆ ಕೆಲಸದಿಂದ ಹಿಡಿದು ಎಲ್ಲವನ್ನೂ ನಾವೇ ಮಾಡಿಕೊಂಡೆವು. ಕೇರಳದವರೇ ಆದ ಭಾಮ ಅರುಣ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದ ದಯಾನಂದ್‌, ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಚಿತ್ರ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. 

ಎಸ್.ಕೆ.ಟಾಕೀಸ್ ಲಾಂಛನದಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್. ಹಾಗೂ ಮಿಮಿಕ್ರಿ ದಯಾನಂದ್.‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.