ಜಿಮ್‌ನಲ್ಲಿ ವರ್ಕೌಟ್: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ

ಹೈದರಾಬಾದ್: ಆರೋಗ್ಯ ಮತ್ತು ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿರುವ ಬಹು ಭಾಷಾ ನಟಿ ಸಮಂತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದಾರೆ.
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತೆಲುಗು ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ, ದೇಹದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸಮಂತಾ ಅತ್ಯಂತ ಸುಲಭವಾಗಿ ತೂಕ ಎತ್ತುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ತೆರೆಕಂಡ ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ‘ಹೂ ಅಂತಿಯಾ ಮಾವ.. ಊ ಊ ಅಂತಿಯಾ’ ಹಾಡಿಗೆ ಸಮಂತಾ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ.
ಓದಿ... ಬಾಲಿವುಡ್ಗೆ ನನ್ನನ್ನು ಭರಿಸಲಾಗದು: ಮಹೇಶ್ ಬಾಬು ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ
ಸಿನಿಮಾ ಗೆಲುವಿನಲ್ಲಿ ಈ ವಿಶೇಷ ಹಾಡು ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಫಿಲಿಪ್ ಜಾನ್ ನಿರ್ದೇಶನದ ‘ಅರೆಂಜ್‌ಮೆಂಟ್ಸ್ ಆಫ್ ಲವ್’ ಎಂಬ ಹಾಲಿವುಡ್ ಚಿತ್ರದಲ್ಲಿ ಸಮಂತಾ ಅಭಿನಯಿಸಲಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ಅವರು ಕಳೆದ ವರ್ಷದ (2021) ಅಕ್ಟೋಬರ್‌ನಲ್ಲಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು.
ಸದ್ಯ ಸಮಂತಾ, ವಿಜಯ್ ದೇವರಕೊಂಡ ಅವರೊಂದಿಗೆ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಓದಿ... ಸಲ್ಮಾನ್ ಶುಭ ಹಾರೈಕೆ ಬೆನ್ನಲ್ಲೇ ಚಿತ್ರರಂಗದಲ್ಲಿ ನಾನು ಒಬ್ಬಂಟಿಯಲ್ಲವೆಂದ ಕಂಗನಾ!
ಓದಿ...
41ನೇ ವಸಂತಕ್ಕೆ ಕಾಲಿಟ್ಟ ಮಾದಕ ತಾರೆ ಸನ್ನಿ ಲಿಯೋನ್: ಅಭಿಮಾನಿಗಳಿಂದ ಶುಭ ಹಾರೈಕೆ
ಸುಧಾ ಮೂರ್ತಿ ಅವರನ್ನು ಭೇಟಿಯಾದ ರಾಬರ್ಟ್ ಬೆಡಗಿ ‘ಆಶಾ ಭಟ್’; ಫೋಟೊ ವೈರಲ್
ನ್ಯೂಯಾರ್ಕ್ನಲ್ಲಿರುವ ಪ್ರಿಯಾಂಕಾ ರೆಸ್ಟೋರೆಂಟ್ಗೆ ವಿಕ್ಕಿ– ಕತ್ರಿನಾ ಭೇಟಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.