‘ಕೃಷ್ಣಂ ಪ್ರಣಯ ಸಖಿ’ ಬಳಿಕ ‘ಪಿನಾಕ’ ಸಿನಿಮಾ ಒಪ್ಪಿಕೊಂಡಿದ್ದ ನಟ ಗಣೇಶ್ ಇದೀಗ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಗೀತಸಾಹಿತಿ ಹಾಗೂ ನಿರ್ದೇಶಕ ಅರಸು ಅಂತಾರೆ ನಿರ್ದೇಶನದ ಹೊಸ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ.

ಎಸ್ಎನ್ಟಿ ಎಂಟರ್ಪ್ರೈಸಸ್ನಡಿ ರವಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ತೆಲುಗಿನ ‘ಹನು–ಮ್ಯಾನ್’ ಖ್ಯಾತಿಯ ನಟಿ ಅಮೃತ ಅಯ್ಯರ್ ನಟಿಸುತ್ತಿದ್ದಾರೆ. ಈ ಮೂಲಕ ಅವರು ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ‘ಲವ್ ಇನ್ ಮಂಡ್ಯ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಅರಸು ಅಂತಾರೆ ಈ ಸಿನಿಮಾದಲ್ಲಿ ಮತ್ತೊಂದು ಕೌಟುಂಬಿಕ ಕಥಾಹಂದರವನ್ನು ಪ್ರೇಕ್ಷಕರೆದುರಿಗೆ ಇಡಲಿದ್ದಾರೆ. ಏಪ್ರಿಲ್ 6ರಂದು ಚಿತ್ರದ ಮುಹೂರ್ತ ನಡೆಯಲಿದ್ದು, 7ರಿಂದಲೇ ಚಿತ್ರೀಕರಣಕ್ಕೆ ಚಿತ್ರತಂಡ ಇಳಿಯಲಿದೆ. ಬೆಂಗಳೂರು, ಮೈಸೂರು ಮುಂತಾದೆಡೆ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ ಅರಸು ಅಂತಾರೆ.

ಅರಸು ಅಂತಾರೆಯವರೇ ಚಿತ್ರಕಥೆ ಬರೆದಿದ್ದಾರೆ. ಕ್ರಾಂತಿಕುಮಾರ್ ಹಾಗೂ ಶೈಲೇಶ್ ಕುಮಾರ್ ಸಂಭಾಷಣೆಯಲ್ಲಿ ಸಾಥ್ ನೀಡಿದ್ದಾರೆ. ಸುಜ್ಞಾನ್ ಛಾಯಾಚಿತ್ರಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನ, ವಿಜಯ್ ರಾಕೇಶ್ ಕಶ್ಯಪ್ ಮತ್ತು ಕೀರ್ತಿ ಕೃಷ್ಣಪ್ಪ ಅವರ ಸಹ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.