ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸೂತ್ರಧಾರಿ’ಯ ಹಾಡು ಮೆಚ್ಚಿದ ಪ್ರೇಕ್ಷಕ

Last Updated 26 ಜನವರಿ 2023, 19:07 IST
ಅಕ್ಷರ ಗಾತ್ರ

‘ಸೂತ್ರಧಾರಿ’ ಚಿತ್ರದ ಹಾಡು ಯುಟ್ಯೂಬ್‌ನಲ್ಲಿ ಭರ್ಜರಿ ಸದ್ದು ಮಾಡಿದೆ. ‘ಬಾ ಬೇಬಿ... ಡ್ಯಾಶ್‌...’ ಎಂಬ ಹಾಡನ್ನು ಕೋಟಿಗೂ ಮಿಕ್ಕಿ ವೀಕ್ಷಕರು ನೋಡಿ ಖುಷಿ ಪಟ್ಟಿದ್ದಾರೆ. ಇದಕ್ಕೆ ಮೋಹನ್‌ ಮಾಸ್ಟರ್‌ ಅವರ ನೃತ್ಯ ನಿರ್ದೇಶನವಿದೆ. ಜನರ ಮೆಚ್ಚುಗೆಗೆ ಖುಷಿಯಾದ ಚಿತ್ರತಂಡ ಇತ್ತೀಚೆಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದೆ.

ಈ ಹಾಡನ್ನು ಬರೆದು, ಸಂಗೀತ ಸಂಯೋಜಿಸಿ ನಾಯಕನಾಗಿಯೂ ನಟಿಸಿದ್ದಾರೆ ಚಂದನ್‌ ಶೆಟ್ಟಿ. ಚಂದನ್‌ ಅವರ ಜೊತೆ ಚೇತನ್‌ ಅವರೂ ಸಾಹಿತ್ಯ ಬರೆಯಲು ಕೈ ಜೋಡಿಸಿದ್ದಾರೆ. ‘ಈ ಗೀತೆಯಲ್ಲಿ ನಾನಿರುವುದು ಖುಷಿಯಾಗಿದೆ’ ಎನ್ನುತ್ತಾರೆ ನಟಿ ಸಂಜನಾ ಆನಂದ್.

'ಈ ಗೀತೆ ನಮ್ಮ ಚಿತ್ರಕ್ಕೆ ಆಮಂತ್ರಣವಾಗಿದೆ. ಹಾಡು ನೋಡಿದವರು ಇಡೀ ಸಿನಿಮಾವನ್ನು ನೋಡುವ ಹಾಗೆ ಮಾಡುವ ಜವಾಬ್ದಾರಿ ನನ್ನದು’ ಎನ್ನುವುದು ನಿರ್ದೇಶಕ ಕಿರಣ್‌ ಕುಮಾರ್‌ ಅವರ ವಿಶ್ವಾಸ. ನವರಸನ್‌ ಈ ಚಿತ್ರದ ನಿರ್ಮಾಪಕರು. ಈ ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿವೆಯಂತೆ. ಫೆಬ್ರುವರಿಯಲ್ಲಿ ಟ್ರೇಲರ್‌ ಬಿಡುಗಡೆ, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದರು ನವರಸನ್‌. ಅಪೂರ್ವಾ ಈ ಚಿತ್ರದ ನಾಯಕಿ. ನಟ ತಬಲಾನಾಣಿ, ಸೆಟ್ ವರ್ಕ್ ಮಾಡಿರುವ ಕಿರಣ್, ನಟಿ ಪಲ್ಲವಿ, ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್, ಸಾಹಿತಿ ಕಿನ್ನಾಳ್‌ ರಾಜ್ ಚಿತ್ರತಂಡದಲ್ಲಿದ್ದಾರೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರವನ್ನು ಈ ಚಿತ್ರ ಹೊಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT