ಬಹುತೇಕ ಹೊಸಬರಿಂದಲೇ ಕೂಡಿರುವ ‘ಆಸ್ಟಿನ್ನ ಮಹನ್ಮೌನ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿನಯ್ ಕುಮಾರ್ ವೈದ್ಯನಾಥನ್ ನಿರ್ದೇಶನದ ಚಿತ್ರ ಸೆ.5ರಂದು ತೆರೆಗೆ ಬರಲಿದೆ.

‘ನಿರ್ದೇಶಕರು ಡಿವಿಜಿ ಕುಟುಂಬಕ್ಕೆ ಸೇರಿದವರು. ಹೀಗಾಗಿ ನಾನು ಈ ವೇದಿಕೆಯಲ್ಲಿದ್ದೇನೆ. ಈ ಚಿತ್ರದ ಟ್ರೇಲರ್ ಬಹಳ ವಿಭಿನ್ನವಾಗಿ ಬಂದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳು ಯಶಸ್ಸನ್ನು ಗಳಿಸುತ್ತಿವೆ. ಆ ಸಾಲಿನಲ್ಲಿ ಈ ಚಿತ್ರವು ಸಾಗಲಿ. ನಟ, ನಿರ್ದೇಶಕ ವಿನಯ್ ವೃತ್ತಿಯಿಂದ ಎಂಜಿನಿಯರ್ ಆಗಿದ್ದರೂ ಕೂಡ ಸಿನಿಮಾ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾನೆ. ವರ್ಷಗಟ್ಟಲೆ ಇಲ್ಲಿ ಕೆಲಸ ಮಾಡಿದ್ದಾನೆ. ಈ ಚಿತ್ರವನ್ನು ಕೆಆರ್ಜಿ ಫಿಲ್ಮ್ಸ್ ಬಿಡುಗಡೆ ಮಾಡುತ್ತಿದೆ’ ಎಂದರು ಕೆ.ಮಂಜು.

'ನಾನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ ಸಿನಿಮಾ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದೆ. ಬಹಳಷ್ಟು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದು, ನಂತರ ಕಿರುಚಿತ್ರಗಳನ್ನು ನಿರ್ದೇಶಿಸಿದೆ. 13 ವರ್ಷಗಳ ಶ್ರಮದ ಫಲವಾಗಿ ಈಗ ಎವಿವಿ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಸಿನಿಮಾ ಮಾಡಿರುವೆ. ಚಿತ್ರದಲ್ಲಿ ಲವ್, ಥ್ರಿಲ್ಲಿಂಗ್ ಹಾಗೂ ಭಾವನಾತ್ಮಕ ಅಂಶಗಳನ್ನು ಹೊಂದಿರುವ ಕಥೆ. ಈ ಮಹಾ ಮೌನದ ಹಿಂದಿರುವ ಘಟನೆಯೇ ಚಿತ್ರದ ಕಥಾಸಾರ. 90ರ ಕಾಲಘಟ್ಟದಲ್ಲಿ ನಡೆಯುವ ಕಥೆ’ ಎಂದರು ನಿರ್ದೇಶಕರು.

‘ಇದು ನನ್ನ ಮೊದಲ ಚಿತ್ರ. ಒಂದು ವಿಭಿನ್ನ ಪಾತ್ರದಲ್ಲಿ ನಟಿಸಿರುವೆ. ನಟಿಯಾಗಬೇಕೆಂದು ಬಹಳ ಕಾಲದಿಂದ ಕನಸು ಕಂಡಿದ್ದೆ. ಹೊಸಬರ ಯತ್ನವನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಪ್ರೋತ್ಸಾಹಿಸಿ’ ಎಂದರು ಚಿತ್ರದ ನಾಯಕಿ ಪ್ರಕೃತಿ.

ಬಲ ರಾಜವಾಡಿ, ರಘು ರಾಮನಕೊಪ್ಪ, ಜಗಪ್ಪ, ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಶ್ವಿ ಸಂಗೀತ, ರಾಜಕಾಂತ್ ಛಾಯಾಚಿತ್ರಗ್ರಹಣ, ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.