ಭಾನುವಾರ, ಏಪ್ರಿಲ್ 2, 2023
24 °C

₹200 ಕೋಟಿ ಗಳಿಕೆ ಕ್ಲಬ್‌ನತ್ತ‘ಅವತಾರ್– ದಿ ವೇ ಆಫ್ ವಾಟರ್’

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹಿಂದಿನ ಶುಕ್ರವಾರ ತೆರೆ ಕಂಡಿರುವ ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನದಲ್ಲೇ ₹100 ಕೋಟಿ ಗಳಿಕೆ ಕ್ಲಬ್‌ ಸೇರಿದ್ದು,  ಗಳಿಕೆ ಪಟ್ಟಿಯಲ್ಲಿ ಲಾಲ್‌ ಸಿಂಗ್‌ ಚಡ್ಡಾ, ವಿಕ್ರಂ ವೇದದಂತಹ ಬಾಲಿವುಡ್‌ ಸಿನಿಮಾಗಳನ್ನು ಹಿಂದಿಕ್ಕಿದೆ.

ಪ್ರತಿ ನಿತ್ಯ ₹15 ಕೋಟಿಗಿಂತ ಹೆಚ್ಚು ಗಳಿಕೆ ಕಾಣುತ್ತಿರುವ ಚಿತ್ರ ಶೀಘ್ರದಲ್ಲೇ ₹200 ಕೋಟಿ ಕ್ಲಬ್‌ ಸೇರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸೋಮವಾರ ₹18 ಕೋಟಿ, ಮಂಗಳವಾರ 16 ಕೋಟಿ ಗಳಿಕೆ ಕಂಡಿದೆ. ರಾಮಸೇತು, ವಿಕ್ರಂ ವೇದ ಚಿತ್ರಗಳು ಒಟ್ಟಾರೆ ₹70–80 ಕೋಟಿ ಗಳಿಕೆ ಕಂಡಿತ್ತು. ಲಾಲ್‌ ಸಿಂಗ್‌ ₹58 ಕೋಟಿ ಗಳಿಸಿತ್ತು.

ಆದಾಗ್ಯೂ ಭಾನುವಾರಕ್ಕೆ ಹೋಲಿಸಿದರೆ ವಾರದ ಮೊದಲ ದಿನ ಸಿನಿಮಾದ ಗಳಿಕೆ ಶೇ.60ರಷ್ಟು ಕುಸಿದಿದೆ. ಈ ಟ್ರೆಂಡ್‌ ಮುಂದುವರಿದರೆ ಸಿನಿಮಾ ಎರಡನೇ ವಾರದಲ್ಲೇ ಮುಗ್ಗರಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. 

ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಮುಂಗಡ ಬುಕ್ಕಿಂಗ್‌ ಕಂಡಿದ್ದು, ಹಲವು ನಗರಗಳಲ್ಲಿ ಟಿಕೆಟ್‌ ದರ ₹2500–3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡಿದ್ದಾರೆ. ವಿಶ್ವದಾದ್ಯಂತ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲೂ ಗಳಿಕೆ ಜೋರಾಗಿದೆ. ಅವತಾರ್‌ ಮೊದಲ ಭಾಗ ಜಾಗತಿಕವಾಗಿ 2.9 ಶತಕೋಟಿ ಡಾಲರ್‌ ಗಳಿಕೆ ಕಂಡು ಇತಿಹಾಸ ಬರೆದಿತ್ತು. 

ಸಿನಿಮಾದ ಕಥೆ ಸುಮಾರಾಗಿದೆ. ಆದರೆ ತಾಂತ್ರಿಕವಾಗಿ ಸಿನಿಮಾ ಅತ್ಯುತ್ಕೃಷ್ಟವಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ನೀರಿನೊಳಗಿನ ಜಗತ್ತು, ವಿಎಫ್‌ಎಕ್ಸ್‌, 3ಡಿ ಎಫೆಕ್ಟ್‌ಗಳು ಅತ್ಯದ್ಬುತವಾಗಿವೆ. ಕ್ಲೈಮ್ಯಾಕ್ಸ್‌ನ ಯುದ್ಧ ಎದ್ದು ನಿಂತು ಚಪ್ಪಾಳೆ ತಟ್ಟುವಂತಿದೆ. ಮೇಕಿಂಗ್‌, ಎಫೆಕ್ಟ್‌, ಕೊನೆಯ ಒಂದು ಗಂಟೆಯ ಆ್ಯಕ್ಷನ್‌ ಎಲ್ಲವೂ ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು