ಬೆಂಗಳೂರು: ‘ನೀರ್‌ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ –ಜಗ್ಗೇಶ್ ಜೋಡಿ ಇದೀಗ ‘ತೋತಾಪುರಿ’ ಸಿನಿಮಾದಲ್ಲಿ ಒಂದಾಗಿದ್ದು, ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ.

ಸದ್ಯ ಸಿನಿಮಾದ ಟೀಸರ್ ಪ್ರೋಮೊ, ಹಾಡು ಬಿಡುಗಡೆ ಆಗಿದ್ದು, ಶೀಘ್ರವೇ ಪ್ರೇಕ್ಷಕರ ಎದುರು ಬರುವ ಮೂನ್ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚಿಗೆ ಯುಟ್ಯೂಬ್‌ನಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಿತ್ತು. ಇದೀಗ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅದಿತಿ ಪ್ರಭುದೇವ ಮತ್ತು ಜಗ್ಗೇಶ್ ಕಾಣಿಸಿಕೊಂಡಿರುವ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಯೂಟ್ಯೂನ್‌ನಲ್ಲಿ ಈ ಹಾಡು 68.64 ಲಕ್ಷ ವೀಕ್ಷಣೆ ಪಡೆದುಕೊಂಡಿದ್ದು, ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ಚಿತ್ರದ ಹಾಡುಗಳಿಗೆ ವಿಜಯ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸಿಲೀನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಬಗ್ಲು ತೆಗೆ ಮೇರಿ ಜಾನ್..’ ಹಾಡಿಗೆ ವಾಸರಾಜ್ ಸೋಸಲೆ, ಅನನ್ಯ ಭಟ್ ಮತ್ತು ಸುಪ್ರಿಯಾ ರಾಮ್ ಧ್ವನಿ ನೀಡಿದ್ದಾರೆ.

ಈ ಹಾಡಿನ ಮೂಲಕ ಜಗ್ಗೇಶ್ –ಅದಿತಿ ಜೋಡಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಸಿನಿಮಾವನ್ನು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

ಎರಡು ಭಾಗಗಳಲ್ಲಿ ಈ ಚಿತ್ರವು ತೆರೆಗೆ ಬರಲಿದ್ದು, ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ಡಾಲಿ ಧನಂಜಯ್, ವೀಣಾ ಸುಂದರ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಕೆ.ಎ. ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಓದಿ... Teddy Day 2022: ಪ್ರಿಯತಮೆಗೆ ‘ಟೆಡ್ಡಿ’ ಉಡುಗೊರೆ ನೀಡುವುದು ಯಾಕೆ ಗೊತ್ತಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.