ಶನಿವಾರ, ಜನವರಿ 28, 2023
20 °C

ಗುಜರಾತ್‌: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಪ್ರಚಾರಕ್ಕೆ ಬಜರಂಗದಳ ವಿರೋಧ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ಪ್ರಚಾರಕ್ಕೆ ಬಜರಂಗದಳದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್‌ನ ಕರ್ಣಾವತಿ ಪ್ರದೇಶದ ಮಾಲ್‌ನಲ್ಲಿ ‘ಪಠಾಣ್’ ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿದ ಪ್ರತಿಭಟನಾಕಾರರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಿದ್ದಾರೆ.

ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರದ ಹಾಡೊಂದು ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸಿನಿಮಾ ಹಾಗೂ ಹಾಡಿನಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಚಿತ್ರತಂಡಕ್ಕೆ ನಿರ್ದೇಶಿಸಿದೆ.

‘ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮುನ್ನ, ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿದ ‘ಪಠಾಣ್‌’ ಚಿತ್ರದ ಪರಿಷ್ಕೃತ ಪ್ರತಿಯನ್ನು ಸಲ್ಲಿಸಲು ಚಿತ್ರದ ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲಂಸ್‌ಗೆ ಸಿಬಿಎಫ್‌ಸಿ ಸೂಚಿಸಿದೆ’ ಎಂದು ಮಂಡಳಿಯ ಅಧ್ಯಕ್ಷ ಪ್ರಸೂನ್‌ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದರು.

ಡಿ.12ರಂದು ಬಿಡುಗಡೆಯಾಗಿದ್ದ ಚಿತ್ರದ ‘ಬೇಷರಮ್‌ ರಂಗ್‌’ ಹಾಡು ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಒಳಉಡುಪು ಧರಿಸಿದ್ದು ಪ್ರತಿಭಟನೆಗಳಿಗೂ ಕಾರಣವಾಗಿತ್ತು. ಚಿತ್ರವನ್ನು ಬ್ಯಾನ್‌ ಮಾಡುವ ಕೂಗೂ ಇದೇ ಸಂದರ್ಭದಲ್ಲಿ ಎದ್ದಿತ್ತು. ಸಿನಿಮಾ ಜ.25ರಂದು ಬಿಡುಗಡೆಯಾಗಲಿದೆ.

ಇವನ್ನೂ ಓದಿ...

*

* ಪಠಾಣ್‌ ದೇಶಭಕ್ತಿಯ ಚಿತ್ರ ಎಂದ ಶಾರೂಖ್‌ ಖಾನ್‌

* Pathaan Controversy: ಏನೇ ಆಗಲಿ, ಧನಾತ್ಮಕವಾಗಿ ಇರುತ್ತೇನೆ: ಶಾರುಖ್ ಖಾನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು