ಕುಮಾರ ಬೇಂದ್ರೆ ನಿರ್ದೇಶನದ ‘ಬಂಧಮುಕ್ತ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

‘ಸಮಾಜಕ್ಕೆ ಉತ್ತಮ ಹಾಗೂ ಆರೋಗ್ಯಪೂರ್ಣ ಸಂದೇಶ ನೀಡುವಂತಹ ಚಲನಚಿತ್ರವನ್ನು ಕುಮಾರ ಬೇಂದ್ರೆ ನಿರ್ದೇಶನ ಮಾಡಿದ್ದಾರೆ. ಪುರುಷನ ದಬ್ಬಾಳಿಕೆ ಮತ್ತು ಸಂಕೋಲೆಗಳ ವಿರುದ್ಧ ದಿಟ್ಟ ಯುವತಿಯೊಬ್ಬಳು ಹೋರಾಟ ಮಾಡಿ, ತನ್ನ ಬದುಕನ್ನು ಸಂಕೋಲೆಯಿಂದ ಮುಕ್ತಗೊಳಿಸುವ ಈ ಚಿತ್ರದ ಕಥೆಯು ಸಮಾಜಕ್ಕೆ ಮಾದರಿ ಆಗಬಲ್ಲದು’ ಎಂದರು.

‘ಹಿಂಸೆ, ಕ್ರೌರ್ಯ ಮತ್ತು ಅನಗತ್ಯವಾದ ವೈಭವವನ್ನು ಬಿಂಬಿಸುವ ಚಿತ್ರಗಳೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳ ಅಗತ್ಯವಿದೆ. ಅರವತ್ತು-ಎಪ್ಪತ್ತರ ದಶಕಗಳು ಸಾಮಾಜಿಕ, ಸದಭಿರುಚಿಯ ಚಲನಚಿತ್ರಗಳ ಸುವರ್ಣ ಕಾಲವಾಗಿತ್ತು. ಅಂದು ಇಂತಹ ಸಿನಿಮಾಗಳಿಗೆ ವಿಶೇಷವಾದ ಗೌರವ, ಮೌಲ್ಯವಿತ್ತು. ಇಂದು ಇಂತಹ ಒಳ್ಳೆಯ ಉದ್ದೇಶದ ಸಿನಿಮಾಗಳನ್ನು ಎಲ್ಲ ರೀತಿಯಿಂದ ಮೂಲೆಗುಂಪು ಮಾಡಲಾಗಿದೆ. ಇದರಿಂದ ಕನ್ನಡ ಚಲನಚಿತ್ರಗಳ ಕುರಿತು ಜಾಗತಿಕ ವೇದಿಕೆಗಳಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸದಭಿರುಚಿಯ ಕನ್ನಡ ಚಲನಚಿತ್ರಗಳನ್ನು ಪ್ರೋತ್ಸಾಹಿಸಿ ಪೋಷಿಸುವುದು ಕನ್ನಡಿಗರ ಕರ್ತವ್ಯವಾಗಲಿ’ ಎಂದು ತಿಳಿಸಿದರು.

ಶಿವಪುತ್ರಪ್ಪ ಆರ್. ಆಶಿ ಬಂಡವಾಳ ಹೂಡಿದ್ದಾರೆ. ಸಿದ್ಧೇಶ್ವರ ಕಟಕೋಳ ಸಂಗೀತ, ವಿಘ್ನೇಶ್ ಛಾಯಾಚಿತ್ರಗ್ರಹಣ, ಸತ್ಯಜಿತ್ ಸಂಕಲನ ಚಿತ್ರಕ್ಕಿದೆ. ಐಶ್ವರ್ಯ ನಾಗರಾಜ, ರಿತಿಕಾ ಯಲ್ಲಪ್ಪ, ಮಂಜುನಾಥಗೌಡ ಪಾಟೀಲ, ಸನತ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.