ಹಿಂದಿ ಭಾಷೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 19ರ ವಿಜೇತರಾಗಿ ಕಿರುತೆರೆ ನಟ ಗೌರವ್ ಖನ್ನಾ ಹೊರಹೊಮ್ಮಿದ್ದಾರೆ. ನಟ ಗೌರವ್ ಖನ್ನಾ ಅವರಿಗೆ ಬಿಗ್ಬಾಸ್ ಟ್ರೋಫಿ ಜೊತೆಗೆ ₹50 ಲಕ್ಷ ಬಹುಮಾನ ನೀಡಲಾಗಿದೆ.
.ಬಿಗ್ಬಾಸ್ ವಿಜೇತ ಸೂರಜ್ ಚವಾಣ್ ಅದ್ಧೂರಿ ವಿವಾಹ; ಚಿತ್ರಗಳು ಇಲ್ಲಿವೆ.ಬಿಗ್ಬಾಸ್ ಮನೆಯಿಂದ ಹೊರ ಹೋಗಲು 9 ಸ್ಪರ್ಧಿಗಳು ನಾಮಿನೇಟ್: ಯಾರವರು?.
ನಟ ಗೌರವ್ ಖನ್ನಾ ಜೊತೆಗೆ ಫರ್ಹಾನಾ ಭಟ್, ಅಮಲ್ ಮಲಿಕ್, ಪ್ರಣಿತ್ ಮೋರ್ ಮತ್ತು ತಾನ್ಯಾ ಮಿತ್ತಲ್ ಟಾಪ್–5 ಫೈನಲಿಸ್ಟ್ ಆಗಿದ್ದರು. ಈ ಐವರ ಪೈಕಿ ಕೊನೆಯಲ್ಲಿ ಗೌರವ್ ಖನ್ನಾ ಹಾಗೂ ಫರ್ಹಾನಾ ಉಳಿದುಕೊಂಡರು. ಆಗ ವೇದಿಕೆಗೆ ಬಂದ ಗೌರವ್ ಹಾಗೂ ಫರ್ಹಾನಾ ಭಟ್ ಇಬ್ಬರಲ್ಲಿ ನಟ ಸಲ್ಮಾನ್ ಖಾನ್ ಅವರು ವಿಜೇತರು ಯಾರೆಂದು ಘೋಷಿಸಿದ್ದಾರೆ.

ಈ ಬಾರಿಯ ಬಿಗ್ಬಾಸ್ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಧಿಕೃತವಾಗಿ ವಿಜೇತರಾಗಿ ಹೊರಹೊಮ್ಮಿದ ಗೌರವ್ ಬಿಗ್ಬಾಸ್ ಸೀಸನ್ 19 ಟ್ರೋಫಿ ಜೊತೆಗೆ ₹50 ಲಕ್ಷದ ಚೆಕ್ ಅನ್ನು ಬಹುಮಾನವಾಗಿ ಪಡೆದುಕೊಂಡರು.

ಇನ್ನು, ಬಿಗ್ಬಾಸ್ ಟ್ರೋಫಿ ತಮ್ಮದಾಗಿಸಿಕೊಂಡ ಗೌರವ್ ಸಾಮಾಜಿಕ ಜಾಲತಾಣದಲ್ಲಿ ವೋಟ್ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ‘ಮೂರು ತಿಂಗಳ ಪ್ರಯಾಣ ಕೊನೆಗೂ ಅಂತ್ಯಗೊಂಡಿದೆ. ಟ್ರೋಫಿ ಮನೆಗೆ ಬಂದಿದೆ. ಜನರು ‘ಜಿಕೆ ಏನು ಮಾಡುತ್ತಾನೆ?’ ಎಂದು ಕೇಳುತ್ತಿದ್ದರು. ಅದಕ್ಕೆ ಮನೆಯವರು ಜಿಕೆ ನಮ್ಮೆಲ್ಲರಿಗೂ ಟ್ರೋಫಿಯನ್ನು ಮನೆಗೆ ತರುತ್ತಾನೆ ಎಂದಿದ್ದರು. ಅದರಂತೆ ಟ್ರೋಫಿ ಮನೆಗೆ ಬಂದಿದೆ’ ಎಂದು ಬರೆದುಕೊಂಡಿದ್ದಾರೆ.

ಈ ಗೆಲುವು ವೈಯಕ್ತಿಕವೆನಿಸಬಹುದು. ಆದರೆ, ಇದು ನನ್ನ ಮೇಲೆ ನಂಬಿಕೆ ಇರಿಸಿ ಮತ ಚಲಾಯಿಸಿದ ಪ್ರತಿಯೊಬ್ಬರಿಗೂ ಸಲ್ಲುತ್ತದೆ. ನಿಮಗೆಲ್ಲ ಧನವ್ಯಾದಗಳು. ಇಂದು ಕೇವಲ ಟ್ರೋಫಿ ಗೆದ್ದ ಖುಷಿಯನ್ನು ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ನೀವು ನನ್ನ ಮೇಲಿಟ್ಟ ನಂಬಿಕೆ, ಪ್ರೀತಿ ಮತ್ತು ಒಗ್ಗಟ್ಟನ್ನು ಆಚರಿಸುತ್ತಿದ್ದೇವೆ’ ಎಂದು ವೋಟ್ ಹಾಕಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.