ಶನಿವಾರ, ಆಗಸ್ಟ್ 13, 2022
26 °C

ಗಡಿ ಕಾಯುವ ವೀರ ಯೋಧರ ಜತೆ ಸಮಯ ಕಳೆದ ನಟ ಅಕ್ಷಯ್ ಕುಮಾರ್

ಪ್ರಜಾವಾಣಿ ನ್ಯೂಸ್ ಡೆಸ್ಕ್ Updated:

ಅಕ್ಷರ ಗಾತ್ರ : | |

Akshay Kumar Instagram

ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ಗುರುವಾರ ಗಡಿ ಭದ್ರತಾ ಪಡೆಯ ಯೋಧರನ್ನು ಭೇಟಿಯಾಗಿದ್ದಾರೆ.

ಯೋಧರನ್ನು ಭೇಟಿಯಾಗಿ ಸಂವಾದ ನಡೆಸಿರುವ ಕುರಿತು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅಕ್ಷಯ್ ಕುಮಾರ್, ವೀರ ಯೋಧರ ಜತೆ ಕಳೆದ ಸಮಯ ಸದಾ ನೆನಪಿನಲ್ಲಿರುತ್ತದೆ ಎಂದು ಅಡಿಬರಹ ನೀಡಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಗಡಿಯಲ್ಲಿನ ಯೋಧರ ಸಂವಾದದ ಫೋಟೊಗಳನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ‌್ಮೀರದ ತುಳೈಲ್‌ನ ಬಿಎಸ್ಎಫ್ ಶಿಬಿರಕ್ಕೆ ಭೇಟಿ ನೀಡಿದ ನಟ ಅಕ್ಷಯ್ ಕುಮಾರ್, ಇಲ್ಲಿಗೆ ಭೇಟಿ ನೀಡುತ್ತಿರುವುದಕ್ಕೆ ಮತ್ತು ಯೋಧರೊಡನೆ ಸಮಯ ಕಳೆಯುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಜತೆಗೆ, ನಿಜವಾದ ಹೀರೋಗಳನ್ನು ಭೇಟಿಯಾಗಿದ್ದೇನೆ, ಅವರಿಗೆ ಹೃದಯಪೂರ್ವಕ ಗೌರವ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ.

ಸೇನಾ ದಿವಸದ ಸಂದರ್ಭದಲ್ಲಿಯೂ ಅಕ್ಷಯ್ ಕುಮಾರ್ ಗಡಿ ಪ್ರದೇಶಕ್ಕೆ ಭೇಟಿ ನೀಡಿ, ಯೋಧರೊಡನೆ ಸಮಯ ಕಳೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು