ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಸಿನಿಮಾ ಹೀರೋ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

Last Updated 14 ಜೂನ್ 2020, 10:25 IST
ಅಕ್ಷರ ಗಾತ್ರ

ಮುಂಬೈ: ‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದ ಬಾಲಿವುಡ್ ನಟಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾನುವಾರ ಮಧ್ಯಾಹ್ನ ವರದಿಯಾಗಿದೆ.

ಸುಶಾಂತ್ ನಿವಾಸಕ್ಕೆ ಪೊಲೀಸರು ಧಾವಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಲಾಕ್‌ಡೌನ್‌ ವೇಳೆ ಸುಶಾಂತ್‌ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನಾಲ್ಕು ದಿನಗಳ ಹಿಂದಷ್ಟೇಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಸುಶಾಂತ್ ಬಹಳ ಬೇಸರಗೊಂಡಿದ್ದರುಎನ್ನಲಾಗಿದೆ.

ಪವಿತ್ರ ರಿಷ್ತಾದಿಂದ ಆರಂಭವಾದ ಪಯಣ

ಕಿರುತೆರೆಯಿಂದ ಬಾಲಿವುಡ್‌ಗೆ ಬಂದು ಮಿಂಚಿದ ನಟ ಸುಶಾಂತ್ ಸಿಂಗ್ ರಜಪೂತ್. ಸ್ಟಾರ್‌ ಪ್ಲಸ್‌ನಲ್ಲಿ ಕಿಸ್ ದೇಶ್ ಮೇ ಹೈ ಮೇರಾ ದಿಲ್ (2008)ರಲ್ಲಿ ಕಿರುತರೆಗೆ ಕಾಲಿಟ್ಟಿದ್ದರೂ ಜೀ ಟಿವಿಯಲ್ಲಿ ಪ್ರಸಾರವಾಗಿದ್ದ ಪವಿತ್ರ ರಿಷ್ತಾ ಎಂಬ ಧಾರವಾಹಿಯಲ್ಲಿ ಮಾನವ್ ದೇಶ್‌ಮುಖ್ ಎಂಬ ಪಾತ್ರ ಗಮನ ಸೆಳೆದಿತ್ತು. ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ಜೋಡಿ ಧಾರವಾಹಿಯಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಹತ್ತಿರವಾಗಿದ್ದ ಕಾಲವದು.ಸಿನಿಮಾ ನಿರ್ಮಾಣದ ಬಗ್ಗೆ ವಿದೇಶದಲ್ಲಿ ಕಲಿಯಲು ಸುಶಾಂತ್ ಪವಿತ್ರ ರಿಷ್ತಾದಿಂದ ಹೊರಗೆ ಹೋಗಿದ್ದರು.

ಕಿರುತರೆ ನಟನೆ ಜತೆ ಝರಾ ನಚ್‌ಕೇ ದಿಖಾ -2, ಝಲಕ್ ದಿಖ್‌ಲಾಜಾ -4 ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು.
ಆನಂತರ 'ಕೈ ಪೋ ಚೇ' ಸಿನಿಮಾದಲ್ಲಿ ಕಾಣಿಸಿಕೊಂಡ ಸುಶಾಂತ್, ಪರಿಣಿತಿ ಚೋಪ್ರಾ ಜತೆ 'ಶುದ್ಧ್ ದೇಸಿ ರೊಮ್ಯಾನ್ಸ್' , ಅಮಿರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ ಅನುಷ್ಕಾ ಶರ್ಮಾಳ ಪ್ರಿಯಕರನಾಗಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ 'ಡಿಟೆಕ್ಟಿವ್ ಬ್ಯೋಮ್‌ಕೇಶ್ ಭಕ್ಷಿ'ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಇದಾದ ನಂತರ ಎಸ್ ಧೋನಿ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದರು.

ಪಟನಾದ ಈ ಯುವಕ ವಾಯುಪಡೆಯಲ್ಲಿ ಪೈಲೆಟ್ ಆಗುವ ಕನಸು ಹೊಂದಿದ್ದರು. ಎಂಜಿನಿಯರ್, ವಕೀಲರ ಕುಟುಂಬದಿಂದ ಬಂದ ಈತ ಎಂಜಿನಿಯರ್ ಆಗಬೇಕೆಂದು ಹೆತ್ತವರ ಆಸೆಯಾಗಿತ್ತು. ಹಾಗಾಗಿ ದೆಹಲಿ ಎಂಜಿನಿಯರಿಂಗ್ಕಾಲೇಜಿಗೆ ಸೇರಿಸಲಾಯಿತು.
ಸುಶಾಂತ್ ಅವರು ಶಾರುಖ್ ಖಾನ್ ಅವರಅಭಿಮಾನಿ. ಮಾತು ಕಡಿಮೆ, ಕಾಲೇಜಿನಲ್ಲಿಯೂ ತನ್ನ ಪಾಡಿಗೆ ಇರುತ್ತಿದ್ದ ಈತನಿಗೆ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಸ್ಕಾಲರ್‌ಶಿಪ್ ಕೂಡಾ ಸಿಕ್ಕಿತ್ತು. ಆಮೇಲೆ ಶೈಮಾಕ್ ಧಾವರ್ ಅವರ ನೃತ್ಯ ಅಕಾಡೆಮಿಗೆ ಸೇರಿದ ಇವರು ಮುಂಬೈಗೆ ಬಂದರು. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಾಗಇಂಜಿನಿಯರ್ ಕಲಿಕೆಗೆ ಸಮಯ ಸಾಕಾಗುತ್ತಿರಲಿಲ್ಲ. ಹಾಗಾಗಿ ಅರ್ಧಕ್ಕೆ ಶಿಕ್ಷಣ ಕೈಬಿಡಬೇಕಾಗಿ ಬಂದಿತ್ತು.

ನಟಿಸಿದ ಸಿನಿಮಾಗಳು
ಕೈ ಪೋ ಚೇ,ಶುದ್ಧ್ ದೇಸೀ ರೊಮ್ಯಾನ್ಸ್,ಡಿಟೆಕ್ಟಿವ್ಬ್ಯೋಮ್‌ಕೇಶ್ ಭಕ್ಷಿ, ಪಿಕೆ,ಎಂ.ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ,
ರಾಬ್ತಾ, ವೆಲ್‌ಕಂ ಟು ನ್ಯೂಯಾರ್ಕ್, ಕೇದಾರ್‌ನಾಥ್, ಸೊನ್ಚಿರಿಯಾ, ಚಿಚೋರೆ, ಡ್ರೈವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT