ಗುರುವಾರ , ಅಕ್ಟೋಬರ್ 21, 2021
27 °C

ಸನ್ ಡೇಸ್‌ಗಾಗಿ ಎದುರು ನೋಡುತ್ತಿರುವ ನಟಿ ಇಲಿಯಾನಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Ileana D'Cruz Instagram

ಬೆಂಗಳೂರು: ಬಾಲಿವುಡ್ ನಟಿ ಇಲಿಯಾನಾ ಡಿ ಕ್ರೂಜ್ ಸಾಮಾಜಿಕ ತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ.

ಜತೆಗೆ ಪ್ರವಾಸ ಹೋಗುವುದು, ಬೀಚ್‌ ಫೋಟೊಗಳನ್ನು ಅಪ್‌ಲೋಡ್ ಮಾಡುವುದು ಕೂಡ ಅವರಿಗೆ ಅಚ್ಚುಮೆಚ್ಚು. ಹೀಗಾಗಿ ಇಲಿಯಾನಾ ಅವರಿಗೆ ಸಾಮಾಜಿಕ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಇಲಿಯಾನಾ ಈ ಬಾರಿ ಮತ್ತೆ ಯಾವಾಗ ಸನ್ ಡೇಸ್ ಬರುತ್ತದೆ ಎನ್ನುವ ಪ್ರಶ್ನೆಯನ್ನು ಕೇಳಿ, ಬೀಚ್‌ನಲ್ಲಿ ಸನ್‌ಬಾತ್ ಮಾಡುತ್ತಿರುವ ಫೋಟೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಇಲ್ಲಿ ಸನ್ ಎಂದಿರುವುದು ಭಾನುವಾರಕ್ಕೂ ಅಥವಾ ಸೂರ್ಯನಿಗೋ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಉಂಟಾಗಿದೆ. ಆದರೆ ಇಲಿಯಾನಾ ಮಾತ್ರ, ಮತ್ತೊಮ್ಮೆ ಯಾವಾಗ ಈ ರೀತಿಯ ದಿನಗಳು, ಪ್ರವಾಸದ ಕ್ಷಣಗಳು ಬರುತ್ತವೋ ಎಂದು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು