ಭಾನುವಾರ, ಆಗಸ್ಟ್ 2, 2020
28 °C

ನಟಿ ಕಂಗನಾ ನಿವಾಸದ ಬಳಿ ಮೊಳಗಿದ ಗುಂಡಿನ ಸದ್ದು, ಭದ್ರತೆ ಹೆಚ್ಚಿಸಿದ ಪೊಲೀಸರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮನಾಲಿ: ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ಮನೆಯ ಬಳಿ ಗುಂಡಿನ ಸುದ್ದು ಕೇಳಿರುವುದಾಗಿ ಬಾಲಿವುಡ್‌ ನಟಿ ಕಂಗನಾ ರಣಾವತ್ ಕಳೆದ ಶನಿವಾರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಗನಾ ನಿವಾಸದ ಸುತ್ತ ಭದ್ರತೆ ಏರ್ಪಡಿಸಲಾಗಿದ್ದು, ಗುಂಡಿನ ಸುದ್ದು ಮೊಳಗಿದ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆಯ ಬಗ್ಗೆ ಹೇಳಿಕೆ ನೀಡಿರುವ ಕಂಗನಾ, 'ಜುಲೈ 31ರ ರಾತ್ರಿ ನಾನು ಮಲಗುವ ಕೋಣೆಯಲ್ಲಿದ್ದೆ. 11: 30ಕ್ಕೆ ಪಟಾಕಿ ಸಿಡಿತದಂತಹ ಶಬ್ದ ಕೇಳಿಬಂತು. ಮೊದಲಿಗೆ, ಆ ಶಬ್ದವು ಪಟಾಕಿಯದ್ದು ಎಂದೇ ನಾನು ಭಾವಿಸಿದೆ. ತದನಂತರ ಮತ್ತೆ ಶಬ್ದ ಕೇಳಿಸಿತು. ಅದು ಈ ಬಾರಿ ಗುಂಡಿನ ಸದ್ದಿನಂತೆ ಭಾಸವಾಯಿತು. ಗಾಬರಿಗೊಂಡ ನಾನು ತಕ್ಷಣ ನನ್ನ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗೆ ಕರೆ ಮಾಡಿ ಏನಾಯಿತು ಎಂದು ಪ್ರಶ್ನಿಸಿದೆ.' ಎಂದಿದ್ದಾರೆ.

'ತಮ್ಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ವ್ಯಕ್ತಿಯು ಕೆಲ ಮಕ್ಕಳು ಪಟಾಕಿ ಹೊಡೆಯುತ್ತಿರಬಹುದು. ನಾವು ಮನೆಯ ಸುತ್ತಮುತ್ತ ನೋಡಿಕೊಂಡು ಬರುತ್ತೇವೆ ಎಂದು ಹೋದರು. ಮನೆಯ ಸುತ್ತಮುತ್ತ ಯಾರಾದರೂ ಕಿಡಿಗೇಡಿಗಳು ಇರಬಹುದು ಎಂದು ಹುಡುಕಿದರು. ಆದರೆ, ಅಲ್ಲಿ ಯಾರೂ ಇರಲಿಲ್ಲ. ನಾವೆಲ್ಲರೂ ಅದು ಗುಂಡಿನ ಸದ್ದು ಇರಬಹುದು ಎಂಬುದಾಗಿ ಭಾವಿಸಿ, ಪೊಲೀಸರಿಗೆ ತಿಳಿಸಿದೆವು' ಎಂದು ಕಂಗಾನಾ ಹೇಳಿಕೆ ನೀಡಿದ್ದಾರೆ. 

'ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ಕುರಿತು ನೇರ ಹೇಳಿಕೆ ನೀಡುತ್ತ ಬಂದಿದ್ದೇನೆ. ಇದು ನನ್ನನ್ನು ಮೌನವಾಗಿರಿಸಲು ಮಾಡಿದ ಪ್ರಯತ್ನವಾಗಿರಬಹುದು' ಎಂದು ಕಂಗನಾ ಆರೋಪಿಸಿದ್ದಾರೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು