ಬುಧವಾರ, ಫೆಬ್ರವರಿ 8, 2023
18 °C

ಬಾಲಿವುಡ್‌ನಲ್ಲಿ ಗಣೇಶ ಚತುರ್ಥಿ ಸಂಭ್ರಮ: ಸೆಲೆಬ್ರಿಟಿಗಳಿಂದ ಹಬ್ಬ ಆಚರಣೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್‌ನಲ್ಲಿ ಗಣೇಶನಿಗೆ ವಿಶೇಷ ಆದ್ಯತೆ. ಚಿತ್ರರಂಗದ ಬಹುತೇಕ ಎಲ್ಲ ನಟ-ನಟಿಯರು ಗಣಪತಿಯ ಹಬ್ಬ ಆಚರಿಸುತ್ತಾರೆ.

ಅದರಂತೆ ಈ ಬಾರಿ ಕೂಡ ಬಾಲಿವುಡ್ ಮಂದಿ ಗಣೇಶ ಚತುರ್ಥಿ ಆಚರಿಸುತ್ತಿದ್ದು, ಸಾಮಾಜಿಕ ತಾಣಗಳ ಮೂಲಕ ಅಭಿಮಾನಿಗಳಿಗೆ ಮತ್ತು ಜನರಿಗೆ ಶುಭ ಕೋರಿದ್ದಾರೆ.

ಬಾಲಿವುಡ್ ಬಿಗ್‌ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಬಚ್ಚನ್ ಮೊದಲಿಗೆ ಗಣೇಶ ಚತುರ್ಥಿಯ ಶುಭ ಕೋರಿ ಪೋಸ್ಟ್ ಮಾಡಿದ್ದಾರೆ.

ಅದಾದ ಬಳಿಕ, ಅಜಯ್ ದೇವಗನ್, ಗಣೇಶನ ಸನ್ನಿಧಾನದಲ್ಲಿರುವ ಫೋಟೊ ಪೋಸ್ಟ್ ಮಾಡಿದ್ದು, ಗಣೇಶ ಎಲ್ಲರಿಗೂ ಶುಭ ತರಲಿ ಎಂದು ಅಡಿಬರಹ ನೀಡಿದ್ದಾರೆ.

ಅನುಪಮ್ ಖೇರ್, ಅಭಿಷೇಕ್ ಬಚ್ಚನ್, ಸೋಹಾ ಅಲಿ ಖಾನ್, ಕುನಾಲ್ ಕೇಮು, ನೇಹಾ ಧೂಪಿಯಾ, ನೀಲ್ ನಿತಿನ್ ಮುಕೇಶ್, ವರುಣ್ ಧವನ್, ಮಾಧುರಿ ದೀಕ್ಷಿತ್, ಶಮಿತಾ ಶೆಟ್ಟಿ, ಹೇಮಾ ಮಾಲಿನಿ, ಬಿಪಾಶ ಬಸು ಸಹಿತ ಬಾಲಿವುಡ್‌ನ ಪ್ರಮುಖ ನಟ-ನಟಿಯರು ಗಣೇಶ ಚತುರ್ಥಿ ಶುಭ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು