ನಿನ್ನೆ (ಶನಿವಾರ) ಗಣೇಶ ಹಬ್ಬದಂದು ದೀಪಿಕಾ ಮತ್ತು ರಣವೀರ್ ಸಿಂಗ್ ಅವರು ಎಚ್. ಎನ್ ರಿಲಯನ್ಸ್ ಆಸ್ಪತ್ರೆಗೆ ಹೋಗುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ವರ್ಷ ಫೆ.29ರಂದು ತಾವು ತಾಯಿಯಾಗುತ್ತಿರುವ ಖುಷಿಯನ್ನು ರಣವೀರ್ ಮತ್ತು ದೀಪಿಕಾ ಜೋಡಿ ಹಂಚಿಕೊಂಡಿದ್ದರು. ಈ ಜೋಡಿ 2018ರಲ್ಲಿ ಇಟಲಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು.
ಗರ್ಭಾವಸ್ಥೆಯನ್ನು ಆನಂದಿಸುತ್ತಿರುವುದಾಗಿ ಹಲವು ಸಂದರ್ಶನ ಮತ್ತು ಅವಾರ್ಡ್ ಕಾರ್ಯಕ್ರಮಗಳಲ್ಲಿ ದೀಪಿಕಾ ಹೇಳಿಕೊಂಡಿದ್ದರು. ಅಲ್ಲದೆ, ಬೇಬಿ ಬಂಪ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಹೆಚ್ಚು ಸುದ್ದಿಯಲ್ಲಿದ್ದರು.