ಟಾಲಿವುಡ್‌ನ ಖ್ಯಾತ ನಟ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಮದುವೆ ರಾಜಸ್ಥಾನದ ಉದಯ್‌ಪುರ್‌ದಲ್ಲಿ ನಡೆದಿದೆ. ನಟಿಯೂ ಆಗಿರುವ ನಿಹಾರಿಕಾ ಕೊನಿಡೆಲಾ ತಮ್ಮ ಪ್ರಿಯಕರ ಚೈತನ್ಯ ಜೊನ್ನಲಗಡ್ಡ ಜೊತೆ ಇಂದು ಬೆಳಿಗ್ಗೆ 7.15ಕ್ಕೆ ಸಪ್ತಪದಿ ತುಳಿದಿದ್ದಾರೆ. ಉದಯ್‌ಪುರ್‌ದ ಐಷಾರಾಮಿ ಹೋಟೆಲ್‌ವೊಂದರಲ್ಲಿ ಈ ಜೋಡಿ ವಿವಾಹ ಕಾರ್ಯಕ್ರಮ ನಡೆದಿದೆ. ಮದುವೆ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು ಭಾಗವಹಿಸಿದ್ದರು.

ಕಳೆದೆರಡು ದಿನಗಳಿಂದ ನಡೆದ ಸಂಗೀತ್, ಮೆಹಂದಿ ಕಾರ್ಯಕ್ರಮದಲ್ಲಿ ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಕುಟುಂಬಸ್ಥರೆಲ್ಲರೂ ಭಾಗವಹಿಸಿದ್ದರು. ತಮ್ಮ ಸಹೋದರನ ಮಗಳಿಗೆ ಚಿರಂಜೀವಿ ಹಾಗೂ ಪತ್ನಿ ಸುರೇಖಾ ನಿಹಾರಿಕಾಗೆ ₹2 ಕೋಟಿ ಮೊತ್ತದ ನೆಕ್ಲೇಸ್ ಉಡುಗೊರೆ ನೀಡಿದ್ದಾರೆ.

ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ನಿಹಾರಿಕಾ ಹಾಗೂ ಚೈತನ್ಯ ಜೊತೆ ನಟ ರಾಮ್‌ಚರಣ್ ಡಾನ್ಸ್ ಮಾಡಿರುವ ವಿಡಿಯೊ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಲ್ಲು ಅರ್ಜುನ್, ಉಪಸನಾ, ವೈಷ್ಣವ್ ತೇಜ್ ಹಾಗೂ ವರುಣ್ ತೇಜ್ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಳ್ಳಲಿದ್ದಾರೆ ನಿಹಾರಿಕಾ ಚೈತನ್ಯ. ಈ ಕಾರ್ಯಕ್ರಮಕ್ಕೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.