ಕೊರಟಾಲ ಶಿವ ಅವರ ಮುಂದಿನ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ನಾಯಕಿಯಾಗಿ ಐಶ್ವರ್ಯಾ ರೈ ಬಚ್ಚನ್ ನಟಿಸಲಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಅವರ ‘ಮಿರ್ಚಿ’, ‘ಜನತಾ ಗ್ಯಾರೆಜ್’, ‘ಶ್ರೀಮಂತುಡು’, ‘ಭರತ್ ಅನೆ ನೇನು’ ಚಿತ್ರಗಳು ಭಾರಿ ಖ್ಯಾತಿ ಗಳಿಸಿತ್ತು.

ಶಿವ ಅವರ ಎಲ್ಲಾ ಚಿತ್ರಗಳು ಒಂದಾದರೊಂದರಂತೆ ಹಿಟ್ ಗಳಿಸಿದ್ದವು. ಈಗ ಅವರ ಮುಂದಿನ ಚಿತ್ರದಲ್ಲಿ ಚಿರಂಜೀವಿ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರ ಮುಂದಿನ ಯುಗಾದಿ ಹಬ್ಬದಂದು ಸೆಟ್ಟೇರಲಿದೆ.

ನಿರ್ದೇಶಕರು ಈಗಾಗಲೇ ಚಿತ್ರದ ಬಗ್ಗೆ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಸುದ್ದಿ ಹರಡಿದೆ. ‘ಈ ಸಿನಿಮಾ ಇನ್ನೂ ಚಿತ್ರಕತೆ ಹಂತದಲ್ಲಿದೆ. ಕೆಲಸ ಆರಂಭವಾಗಿಲ್ಲ. ಕಲಾವಿದರ ಆಯ್ಕೆ ಬಗ್ಗೆ ನಿರ್ದೇಶಕರು, ನಿರ್ಮಾಪಕರು ಏನೂ ಅಧಿಕೃತ ಹೇಳಿಕೆ ನೀಡಿಲ್ಲ’ ಎಂದು ಆ ಸಿನಿಮಾದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.