ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Movies: ಶೀರ್ಷಿಕೆಯಾಯ್ತು ‘ಕ್ಲೈಮ್ಯಾಕ್ಸ್ ಇರುವುದಿಲ್ಲ’

Published : 13 ಸೆಪ್ಟೆಂಬರ್ 2024, 0:18 IST
Last Updated : 13 ಸೆಪ್ಟೆಂಬರ್ 2024, 0:18 IST
ಫಾಲೋ ಮಾಡಿ
Comments

ಇತ್ತೀಚಿನ ದಿನಗಳಲ್ಲಿ ಭಿನ್ನ ಶೀರ್ಷಿಕೆಯ ಸಿನಿಮಾಗಳು ಹೆಚ್ಚಾಗಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಚಿತ್ರ ‘ಈ ಸಿನಿಮಾಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ’ ಇತ್ತೀಚೆಗಷ್ಟೇ ಸೆಟ್ಟೇರಿದೆ. 

ಆರ್.ಕೆ.ಗಾಂಧಿ ನಿರ್ದೇಶನದ ಈ ಚಿತ್ರವನ್ನು ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜೀವ್ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. 

‘ಗೋವಾಕ್ಕೆ ಟ್ರಿಪ್ ಹೊರಡುವ ಆರು ಹುಡುಗ, ಹುಡುಗಿಯರ ಜೀವನದಲ್ಲಿ ಆಗಂತುಕನೊಬ್ಬ ಬಂದಾಗ ಅವರಿಗೆ ಎದುರಾಗುವ ಸಂಕಷ್ಟಗಳು ಹಾಗೂ ಅವುಗಳನ್ನು ಆ ಸ್ನೇಹಿತರು ಹೇಗೆ ಎದುರಿಸುತ್ತಾರೆ ಎಂಬುದೇ ಈ ಚಿತ್ರದ ಕಥೆ. ಸಕಲೇಶಪುರ, ಮಂಗಳೂರು, ಬೆಂಗಳೂರು, ಚಿಕ್ಕಬಳ್ಳಾಪುರ ಸುತ್ತಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕರು. 

‘ಬಾಹುಬಲಿ’ ಖ್ಯಾತಿಯ ಪ್ರಭಾಕರ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹರಿ ಬಂಗಾರಪೇಟ್, ರೂಪಶ್ರೀ, ದೀನ ಉಪ್ಪಾಡ, ರಾಮ್ ಜನಾರ್ದನ್‌ ಮುಂತಾದವರು ತಾರಾಗಣದಲ್ಲಿದ್ದಾರೆ. ಪ್ರಮೋದ್.ಆರ್ ಮತ್ತು ಬಿ.ಯುವರಾಜ್ ಅವರ ಛಾಯಾಚಿತ್ರಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT