ಕ್ಯೂಬಾದ ‘ಟು ದ ವೆಸ್ಟ್ ಇನ್ ಝಪಾಟಾ’ ಚಿತ್ರವು 31ನೇ ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ‘ಗೋಲ್ಡನ್ ರಾಯಲ್ ಬೆಂಗಾಲ್ ಟೈಗರ್’ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ(FIPRESCI) ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.

ಶ್ರೀಲಂಕಾದ ಲಲಿತ್ ರತ್ನಾಯಕೆ ಅವರ 'ರಿವರ್ಸ್ಟೋನ್' ಸಿನಿಮಾಕ್ಕೆ ‘ಅತ್ಯುತ್ತಮ ನಿರ್ದೇಶಕ‘ ವಿಭಾಗದಲ್ಲಿ ಹಾಗೂ ‘ಅತ್ಯುತ್ತಮ ಭಾರತೀಯ ಸಾಕ್ಷ್ಯಚಿತ್ರಕ್ಕಾಗಿ‘ ‘ಬಿಜೋಯಿ ಜಪೋನರ್ ಪಾಟ್ಕಥಾ' ಚಿತ್ರಕ್ಕೂ ‘ಗೋಲ್ಡನ್ ರಾಯಲ್ ಬೆಂಗಾಲ್‘ ಪ್ರಶಸ್ತಿ ದೊರಕಿದೆ.

ಕ್ರೊಯೇಷಿಯಾದ ಇವೊನಾ ಜುಕಾ ಅವರ 'ಬ್ಯೂಟಿಫುಲ್ ಇವ್ನಿಂಗ್ ಬ್ಯೂಟಿಫುಲ್ ಡೇ' ಈ ಚಿತ್ರವು ‘ಅತ್ಯುತ್ತಮ ನಿರ್ದೇಶಕಿ‘ ವಿಭಾಗದಲ್ಲಿ ‘ವಿಶೇಷ ಜ್ಯೂರಿ’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
.‘ಮಾರ್ನಮಿ’ ಚಿತ್ರದ ಟ್ರೇಲರ್ ಬಿಡುಗಡೆ: ಪ್ರೇಕ್ಷಕರ ಗಮನ ಸೆಳೆದ ನಟ ಸುದೀಪ್ ಧ್ವನಿ.
'ಪಾರ್', 'ಪದ್ಮನಾದಿರ್ ಮಾಝಿ', 'ಕಲ್ಬೇಲಾ', 'ಮೋನರ್ ಮಾನುಷ್', 'ರಾಗೀರ್' ಮತ್ತು 'ಅಂತರ್ಜಲಿ ಯಾತ್ರ' ಸೇರಿದಂತೆ ಹಲವಾರು ಚಲನಚಿತ್ರಗಳ ನಿರ್ದೇಶನಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಿರ್ದೇಶಕ ಗೌತಮ್ ಘೋಷ್ ಅವರಿಗೆ FIPRESCI ಹಾಗೂ ‘ಜೀವಮಾನ ಸಾಧನೆ‘ ಪ್ರಶಸ್ತಿಯನ್ನು ನೀಡಲಾಯಿತು.

ಚಂದ್ರಶಿಶ್ ರಾಯ್ ಅವರ 'ಪೋರ್ಷಿ', ಶಿವರಂಜಿನಿ ನಿರ್ದೇಶನದ 'ವಿಕ್ಟೋರಿಯಾ' ಚಿತ್ರವು ‘NETPAC‘ ಪ್ರಶಸ್ತಿ ದೊರಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.