ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.11ರಂದು ಬಿಡುಗಡೆಯಾಗಲಿದೆ ದೀಪಿಕಾ, ಸಿದ್ಧಾಂತ್‌ ಅಭಿನಯದ ‘ಗೆಹರಾಯಿಯಾ’

Last Updated 5 ಜನವರಿ 2022, 8:52 IST
ಅಕ್ಷರ ಗಾತ್ರ

ದೀಪಿಕಾ ಪಡುಕೋಣೆ ಮತ್ತುಸಿದ್ಧಾಂತ್ ಚತುರ್ವೇದಿ ನಟಿಸಿರುವ ‘ಗೆಹರಾಯಿಯಾ’ ಚಿತ್ರದಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.

ಜನವರಿ 25ರಂದು ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಇದೀಗಫೆಬ್ರವರಿ11ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಶಕುನ್‌ ಬಾತ್ರಾ ನಿರ್ದೇಶಿಸಿದ್ದ ಚಿತ್ರದಲ್ಲಿದೀಪಿಕಾ ಪಡುಕೋಣೆ,ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ನಟಿಸಿದ್ದಾರೆ.

ದೀಪಿಕಾ ಪಡುಕೋಣೆ ಹುಟ್ಟುಹಬ್ಬದ ಪ್ರಯುಕ್ತ ಇಂದು(ಬುಧವಾರ) ಚಿತ್ರದ ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಚಿತ್ರದ ನಿರ್ಮಾಪಕ ಕರಣ್‌ ಜೋಹರ್‌ ಅವರು ಈ ಪೋಸ್ಟರ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ ಮತ್ತು ಸಿದ್ಧಾಂತ್‌ ನಡುವಿನ ಇಂಟಿಮೇಟ್‌ ದೃಶ್ಯಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT