ಬಿ ಟೌನ್‌ನ ಹಳೆಯ ಪ್ರೇಮಿಗಳಾದ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಮತ್ತೆ ತೆರೆಯಲ್ಲಿ ಒಂದಾಗಲಿದ್ದಾರೆ!

‘ತಮಾಷಾ‘, ’ಯೆ ಜವಾನಿ ಹೈ ದೀವಾನಿ‘ ಚಿತ್ರಗಳಲ್ಲಿ ಈ ರೊಮ್ಯಾಂಟಿಕ್ ಜೋಡಿಯ ಕೆಮೆಸ್ಟ್ರಿಯಿಂದಾಗಿ ಚಿತ್ರ ರಸಿಕರು ಹುಚ್ಚೆದ್ದು ಕುಣಿಯುವಂತಾಗಿತ್ತು.ತೆರೆಯ ಮೇಲೂ, ನಿಜಜೀವನದಲ್ಲೂ ಪ್ರಣಯ ಪಕ್ಷಿಗಳಾಗಿ ವಿಹರಿಸಿ ಮುನಿಸಿಕೊಂಡು ದೂರಾಗಿದ್ದ ಈ ಜೋಡಿ ನಾಲ್ಕು ವರ್ಷಗಳ ಹಿಂದೆ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿತ್ತು.

ಕಳೆದ ಏಪ್ರಿಲ್‌ನಲ್ಲಿ ಶಬಾನಾ ಆಜ್ಮಿ ಅವರ ಎನ್‌ಜಿಒ ಮಿಜ್ವಾನ್ ವೆಲ್ಫೇರ್ ಸೊಸೈಟಿ ಹಮ್ಮಿಕೊಂಡಿದ್ದ ಫ್ಯಾಷನ್ ಶೋದಲ್ಲಿ ದೀಪಿಕಾ– ರಣಬೀರ್ ಕಪೂರ್, ಮನೀಷ್ ಮಲ್ಹೋತ್ರಾ ವಿನ್ಯಾಸದ ಉಡುಪುಗಳನ್ನು ಧರಿಸಿ ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿ ಬಿ ಟೌನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದರು.

ಆದರೆ ಈ ಬಾರಿ ಅವರು ಕ್ಯಾಮೆರಾಗೆ ಮುಖವೊಡ್ಡಲಿರುವುದು ಬ್ರ್ಯಾಂಡ್‌ವೊಂದರ ಜಾಹೀರಾತಿನ ಚಿತ್ರೀಕರಣಕ್ಕಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.