ಭಾನುವಾರ, ಮೇ 29, 2022
21 °C

ಆಘಾತಕಾರಿ ಪದ ಬಳಸಿ ನಟಿ ದೀಪಿಕಾ ಪಡುಕೋಣೆಗೆ ಕಿರುಕುಳ: ಟ್ರೋಲ್ ಮಾಡಿದ ನಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ನಟಿಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಪದ ಬಳಸುವ ಮೂಲಕ ಕಿರುಕುಳ ನೀಡುವ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಇನ್‌ಸ್ಟಾಗ್ರಾಮಲ್ಲಿ ವ್ಯಕ್ತಿಯೊಬ್ಬ ಡೈರೆಕ್ಟ್ ಮೆಸೇಜ್ ಮೂಲಕ ಅವಹೇಳನಕಾರಿ ಪದ ಬಳಸಿ ನಿಂದಿಸಿದ್ದಾನೆ.  

ಪದೇ ಪದೇ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ತಕ್ಕ ಉತ್ತರ ಕೊಟ್ಟಿರುವ ನಟಿ ಆ ಸ್ಕ್ರೀನ್ ಶಾಟ್ ಅನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿ ಟ್ರೋಲ್ ಮಾಡಿದ್ದರು. ಬಳಿಕ ಪೋಸ್ಟ್ ಡಿಲಿಟ್ ಮಾಡಿದ್ದಾರೆ.

 "ವಾಹ್! ನಿಮ್ಮ ಕುಟುಂಬ ಮತ್ತು ಸ್ನೇಹಿತರು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡಬೇಕು." ಎಂದು ಬರೆದುಕೊಂಡಿದ್ದರು

 .

ಇದನ್ನೂ ಓದಿ.. ‘ಧೂಮ್‌ 4’ನಲ್ಲಿ ಖಳನಾಯಕಿಯಾಗಿ ನಟಿಸಲಿದ್ದಾರಾ ದೀಪಿಕಾ ಪಡುಕೋಣೆ?

ಈ ವರ್ಷ ನಟಿ ದೀಪಿಕಾ ಪಡುಕೋಣೆ ತುಂಬಾನೆ ಬ್ಯುಸಿಯಾಗಿದ್ದು, ಶಕುನ್ ಬಾತ್ರಾ ಅವರ ಮುಂಬರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಸಹ ನಟಿಸಲಿರುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್ ಜೊತೆಗೆ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ, ಪತಿ ರಣವೀರ್ ಸಿಂಗ್ ಜೊತೆಗೆ "'83"  ಚಿತ್ರವೂ ಅವರ ಕೈಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು