ಶುಕ್ರವಾರ, ಜುಲೈ 30, 2021
21 °C

ದೀಪಿಕಾ ಪಡುಕೋಣೆ ಬಾಡಿಗಾರ್ಡ್‌ ಸಂಬಳ ₹1 ಕೋಟಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

deepika Padukone

ಸಿನಿಮಾ ನಟ ನಟಿಯರಿಗೆ ಜನಪ್ರಿಯತೆ ಹೆಚ್ಚಿದಂತೆ, ಒಂದಷ್ಟು ವೈಯಕ್ತಿಕ ರಕ್ಷಣೆಯತ್ತ ಗಮನ ಹರಿಸುತ್ತಾರೆ. ಅದಕ್ಕಾಗಿಯೇ, ಅನೇಕ ನಟ–ನಟಿಯರು ಬಾಡಿಗಾರ್ಡ್‌ ಅಥವಾ ಬೌನ್ಸರ್‌ಗಳನ್ನು ನೇಮಿಸಿಕೊಂಡಿರುತ್ತಾರೆ. 

ನೀವು ಗಮನಿಸಿರಬಹುದು, ಖ್ಯಾತ ನಟ–ನಟಿಯರು ಇದ್ದ ಕಡೆ ಅವರ ಆಸುಪಾಸಿನಲ್ಲಿ ಕಟ್ಟು ಮಸ್ತಾದ, ಯೂನಿಫಾರ್ಂ ತೊಟ್ಟ ವ್ಯಕ್ತಿಗಳು ನಿಂತಿರುತ್ತಾರೆ. ಹಾಂ.. ಅವರೇ.

ಈಗ ವಿಷಯ ಏನಪ್ಪಾ ಅಂದರೆ, ನಮ್ಮ ಕನ್ನಡದ ಕುವರಿ, ಬಾಲಿವುಡ್‌ ನಟಿ ದೀಪಿಕಾಪಡುಕೋಣೆ ಕೂಡ ಹಲವು ವರ್ಷಗಳಿಂದ ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ ನೇಮಿಸಿಕೊಂಡಿದ್ದಾರೆ. ಆ ಅಂಗರಕ್ಷಕನ ಹೆಸರು ಜಲಾಲುದ್ದೀನ್‌. ಇವರಿಗೆ ದೀಪಿಕಾ ವರ್ಷಕ್ಕೆ ಕೊಡುವ ಸಂಬಳ ಎಷ್ಟುಗೊತ್ತೆ ? ಬರೋಬ್ಬರಿ ₹1 ಕೋಟಿ !
 


ದೀಪಿಕಾ ಜತೆ ಜಲಾಲ್

ಈ ಜಲಾಲುದ್ದೀನ್ 2017ರಲ್ಲಿ ವಾರ್ಷಿಕ ₹80 ಲಕ್ಷ ಸಂಬಳ ತೆಗೆದುಕೊಳ್ಳುತ್ತಿದರಂತೆ. ಈ ವರ್ಷ ಅವರ ಸಂಬಳವನ್ನು ದೀಪಿಕಾ ಏರಿಸಿದ್ದಾರೆ.

ಜಲಾಲುದ್ದೀನ್, ದೀಪಿಕಾ ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹಾಜರಿರುತ್ತಾರೆ. ರಣವೀರ್‌– ದೀಪಿಕಾ ಮದುವೆ ಸಮಾರಂಭಗಳಲ್ಲೂ ಜಲಾಲ್‌ ಅವರೇ ಅಲ್ಲಿನ ಸೆಕ್ಯುರಿಟಿ ಮುಖ್ಯಸ್ಥನಾಗಿದ್ದರು.

ಜಲಾಲ್‌, ದೀಪಿಕಾಗೆ ಬರೀ ಬಾಡಿಗಾರ್ಡ್‌ ಅಷ್ಟೇ ಅಲ್ಲ, ದೀಪಿಕಾ ಜಲಾಲ್‌ನ್ನು ತನ್ನ ಸಹೋದರನಂತೆ ಕಾಣುತ್ತಾರೆ. ಅವರಿಬ್ಬರೂ ಆಪ್ತ ಸ್ನೇಹಿತರಂತಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನದಂದು ದೀಪಿಕಾ, ಜಲಾಲ್‌ಗೆ ರಾಖಿ ಕಟ್ಟುತ್ತಾರಂತೆ. 

‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ದೀಪಿಕಾ, ಈಚೆಗೆ ಬಿಡುಗಡೆಯಾದ ‘ಛಪಾಕ್‌’ ಸಿನಿಮಾದವರೆಗೆ  ಭಿನ್ನ ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹೀಗಾಗಿ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 4 ಕೋಟಿಗೂ ಅಧಿಕ ಫಾಲೋಯರ್ಸ್‌ ಇದ್ದಾರೆ.  ಹೊರಗಡೆ ಸಭೆ ಸಮಾರಂಭಗಳಿಗೆ ಹೋದರಂತೂ, ಮುಗಿದೇ ಹೋಯಿತು, ಇವರನ್ನು ನೋಡಲು ಅಭಿಮಾನಿಗಳ ದಂಡೇ ಮೇಳೈಸಿರುತ್ತದೆ. ಜನಪ್ರಿಯತೆ ಹೆಚ್ಚಾದಂತೆ, ರಕ್ಷಣೆಗೂ ಆದ್ಯತೆ ಕೊಡಬೇಕಲ್ಲವೇ ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು