ಶನಿವಾರ, ಆಗಸ್ಟ್ 17, 2019
24 °C
deepika -ranveer party

ರಣವೀರ್ ಹೊಗಳಿಕೆಗೆ ನಾಚಿದ ದೀಪಿಕಾ

Published:
Updated:
Deccan Herald

ಬಾಲಿವುಡ್‌ನ ಬಹುಚರ್ಚಿತ ಜೋಡಿ ದೀಪಿಕಾ–ರಣವೀರ್ ಸಪ್ತಪದಿ ತುಳಿದ ಮೇಲೂ ಅವರ ಬಗೆಗಿನ ಸುದ್ದಿಗಳಿಗೇನೂ ಕೊರತೆಯಿಲ್ಲ. ಈಚೆಗೆ ಬೆಂಗಳೂರಿನಲ್ಲಿ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ಈ ಜೋಡಿಗೆ ಸಂಬಂಧಿಕರು, ಹಿತೈಷಿಗಳು ಸ್ನೇಹಿತರೆಲ್ಲಾ ಸೇರಿ ದೊಡ್ಡ ಪಾರ್ಟಿ ಆಯೋಜಿಸಿದ್ದರು.

ರಣವೀರ್ ತಂಗಿ ರಿತಿಕಾ ಭವ್ನಾನಿ ಅಣ್ಣ ಮತ್ತು ಅತ್ತಿಗೆಗೋಸ್ಕರ ವಿಶೇಷ ಕಾಳಜಿಯಿಂದ ಆಯೋಜಿಸಿದ್ದ ಪಾರ್ಟಿ ಇದಾಗಿತ್ತು. ಬಣ್ಣಬಣ್ಣದ ಅಂಗಿ ತೊಟ್ಟು ಬಣ್ಣದ ದೀಪಗಳ ಮಧ್ಯೆ ಪಾರ್ಟಿಗೆ ಕಳೆ ತಂದಿದ್ದ ಈ ಜೋಡಿ ವೇದಿಕೆ ಮೇಲೆ ಮಾತನಾಡಿದ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ‘ಸ್ನೇಹಿತರೇ, ನಾನೀಗ ಜಗತ್ತಿನ ಅತ್ಯಂತ ಸುಂದರ ಹುಡುಗಿಯನ್ನು ಮದುವೆಯಾಗಿದ್ದೇನೆ... ’ಎಂದು ಅತ್ತ ರಣವೀರ್ ಮೈಕ್ ಹಿಡಿದು ದೊಡ್ಡ ದನಿಯಲ್ಲಿ ಹೇಳುತ್ತಿದ್ದರೆ, ಇತ್ತ ದೀಪಿಕಾಳ ಗುಳಿ ಕೆನ್ನೆಗಳಲ್ಲಿ ಗುಲಾಬಿ ಬಣ್ಣದ ಓಕುಳಿ. ನಾಚುತ್ತಲೇ ವೇದಿಕೆ ಏರಿ, ರಣವೀರ್ ಕೈಹಿಡಿದು ಮಾತನಾಡಿದ ದೀಪಿಕಾ, ತಮ್ಮ ಸಂತಸದ ಕ್ಷಣಗಳಿಗೆ ಸಾಕ್ಷಿಯಾದ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದರು.

ನವೆಂಬರ್ ಕೊನೆ ಮತ್ತು ಡಿಸೆಂಬರ್ ಮೊದಲ ವಾರದಲ್ಲಿ ಈ ಜೋಡಿ ಮುಂಬೈನಲ್ಲೂ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದೆ.

 

Post Comments (+)