ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ದೇವರ ಕನಸಿಗೆ’ ಅಶ್ವಿನಿ ಪುನೀತ್‌ ರಾಜಕುಮಾರ್ ಸಾಥ್‌

‘ದೇವರ ಕನಸು’ ಜುಲೈ 21ರಂದು ತೆರೆಗೆ ಬರಲಿದೆ.
Published 10 ಜುಲೈ 2023, 18:22 IST
Last Updated 10 ಜುಲೈ 2023, 18:22 IST
ಅಕ್ಷರ ಗಾತ್ರ

ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ ಮಕ್ಕಳ ಚಿತ್ರ ‘ದೇವರ ಕನಸು’ ಜುಲೈ 21ರಂದು ತೆರೆಗೆ ಬರಲಿದೆ. ಸುರೇಶ್ ಲಕ್ಕೂರ್ ನಿರ್ದೇಶಿಸಿರುವ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆಗೊಳಿಸಿದರು. ಅಶ್ವಿನಿ ಪುನೀತ್‌ ಒಡೆತನದ ಪಿ.ಆರ್.ಕೆ ಸಂಸ್ಥೆ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಜಯ್ ಕುಮಾರ್, ಶೇಖರ್ ಚಿತ್ರದ ನಿರ್ಮಾಪಕರು.

‘ನ್ಯೂಯಾರ್ಕ್ ಫಿಲ್ಮ್‌ ಅಕಾಡೆಮಿಯಲ್ಲಿ ಅಧ್ಯಯನ ‌ಮಾಡಿದ್ದೇನೆ. ‘ದೇವ’ ಈ ಚಿತ್ರದ ಮುಖ್ಯ ಪಾತ್ರಧಾರಿಯ ಹೆಸರು. ಈ ಪಾತ್ರದಲ್ಲಿ ಮಾಸ್ಟರ್ ದೀಪಕ್ ಅಭಿನಯಿಸಿದ್ದಾರೆ. ಈ ಹುಡುಗ ಕಾಣುವ ಕನಸು ಈಡೇರುತ್ತದೆಯೋ ಅಥವಾ ಇಲ್ಲವೋ? ಎಂಬುದು ಕಥಾಹಂದರ’ ಎಂದರು ಸುರೇಶ್ ಲಕ್ಕೂರ್.

‌ದೀಪಕ್, ಅಮೂಲ್ಯ, ಅರುಷಿ ವೇದಿಕ ಹಾಗೂ ಮಾಕ್ ಮಣಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT