ಬಿಲ್ಬೋರ್ಡ್ ಟ್ರೆಂಡಿಗ್ ಹಾಡಿನ ಪಟ್ಟಿಯಲ್ಲಿ ಧನುಷ್ ನಟನೆಯ 'ತೇರೆ ಇಷ್ಕ್ ಮೇ' ಚಿತ್ರದ ‘ಆವಾರಾ ಅಂಗಾರಾ’ ಹಾಡು ಮೊದಲ ಸ್ಥಾನದಲ್ಲಿದೆ ಎಂದು ಗಾಯಕ ಎ. ಆರ್. ರೆಹಮಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
.ಅತ್ಯಧಿಕ ಗಳಿಕೆ: ಧುರಂಧರ್, ಕಾಂತಾರ ಸೇರಿ ಅಗ್ರ 10 ಸಿನಿಮಾಗಳಿವು.
‘ಆವಾರಾ ಅಂಗಾರಾ’ ಹಾಡು ಕುರಿತಂತೆ ಎ. ಆರ್. ರೆಹಮಾನ್ ಅವರು, ‘ಈ ಹಾಡನ್ನು ಕೇಳಿಸಿಕೊಂಡ ಪ್ರತಿಯೊಂದು ಕಿವಿಗೂ , ಸ್ಪಂದಿಸಿದ ಪ್ರತಿ ಹೃದಯಕ್ಕೂ ಹಾಗೂ ಚಿತ್ರತಂಡಕ್ಕೂ ಕೃತಜ್ಞತೆ ತಿಳಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

‘ಆವಾರಾ ಅಂಗಾರಾ’ ಹಾಡು ಯೂಟ್ಯೂಬ್ನಲ್ಲಿ 1 ಕೋಟಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ನಟ ಧನುಷ್ ಹಾಗೂ ಕೃತಿ ಸೆನನ್ ನಟನೆಯ 'ತೇರೆ ಇಷ್ಕ್ ಮೇ' ಚಿತ್ರವು ಕಳೆದ ನ.28ಕ್ಕೆ ರಿಲೀಸ್ ಆಗಿ, ವಿಶ್ವದಾದ್ಯಂತ ₹100 ಕೋಟಿಗೂ ಅಧಿಕ ಗಳಿಸಿಕೊಂಡಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿತ್ತು.

'ತೇರೆ ಇಷ್ಕ್ ಮೇ' ಸಿನಿಮಾವನ್ನು ಟಿ-ಸೀರೀಸ್ ಮತ್ತು ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಗಾಯಕ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ರಕಾಶ್ ರಾಜ್, ಟೊಟಾ ರಾಯ್ ಚೌಧರಿ, ಪರಮ್ವೀರ್ ಸಿಂಗ್ ಚೀಮಾ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.