ಶನಿವಾರ, ಆಗಸ್ಟ್ 24, 2019
23 °C

ಆರ್ಟಿಕಲ್‌ 15 ರಿಮೇಕ್‌ಗೆ ಧನುಷ್‌ ಉತ್ಸಾಹ

Published:
Updated:

ಇತ್ತೀಚೆಗಿನ ‘ಆರ್ಟಿಕಲ್‌ 15’ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ವಿಮರ್ಶಕರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಈ ಚಿತ್ರವನ್ನು ತಮಿಳು ಭಾಷೆಯಲ್ಲಿ ರಿಮೇಕ್‌ ಮಾಡಲು ನಟ ಧನುಷ್‌ ತೀವ್ರ ಉತ್ಸಾಹ ತೋರಿದ್ದಾರೆ.

ಚಿತ್ರದ ರಿಮೇಕ್‌ ಹಕ್ಕನ್ನು ಶೀಘ್ರವಾಗಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಧನುಷ್‌ ಸೇರಿದಂತೆ ಕಾಲಿವುಡ್‌ನ ಅನೇಕರು ಸಿನಿಮಾದ ಹಕ್ಕು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ರಿಮೇಕ್‌ ಮಾಡುವುದೇ ಆದಲ್ಲಿ ಅದರಲ್ಲಿ ಧನುಷ್‌ ನಾಯಕನಾಗಿ ನಟಿಸುವರೇ ಅಥವಾ ನಿರ್ಮಾಪಕರಾಗಿ ಉಳಿಯಲಿದ್ದಾರೆಯೇ ಎನ್ನುವುದು ಅಸ್ಪಷ್ಟ. 

ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಸುತ್ತಲಿನ ಘಟನಾವಳಿಯನ್ನು ಈ ಚಿತ್ರ ಆಧರಿಸಿದೆ. ಜಾತಿ ಮತ್ತು ಲಿಂಗತಾರತಮ್ಯದ ಕಥಾಹಂದರವನ್ನು ಹೊಂದಿದೆ. ತಮಿಳುನಾಡಿನಲ್ಲಿಯೂ ಜಾತಿವಾದ ಹೆಚ್ಚುತ್ತಿರುವುದರಿಂದ ಈ ಸಿನಿಮಾದ ಬಗ್ಗೆ ಧನುಷ್‌ ಆಸಕ್ತಿ ಹೊಂದಿದ್ದಾರೆನ್ನಲಾಗಿದೆ.

Post Comments (+)