ಶುಕ್ರವಾರ, ಮಾರ್ಚ್ 5, 2021
30 °C

ಅಣ್ಣನನ್ನು ನೆನೆದು ಭಾವುಕರಾದ ಧ್ರುವ ಸರ್ಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಅಣ್ಣ ಚಿರು ಸರ್ಜಾರನ್ನು ನೆನೆದು ಕಣ್ಣೀರಾಗಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.

‘ಸಿನಿಮಾದ ಎಡಿಟಿಂಗ್ ಸಮಯದಲ್ಲಿ ಅಣ್ಣ ಸಿನಿಮಾ ನೋಡಿದ್ದ. ಹಾಗೇ ಮಾಡು, ಹೀಗೆ ಮಾಡು ಎಂದು ಸಲಹೆ ನೀಡಿದ್ದ’ ಎಂದು ಹಿಂದಿನ ದಿನಗಳನ್ನು ನೆನೆಸಿಕೊಂಡಿದ್ದಾರೆ.

‘ಫಸ್ಟ್ ಡೇ ಫಸ್ಟ್ ಷೋ ಯಾವಾಗಲೂ ನಾನು ಅವನ ಜೊತೆಗೆ ನೋಡುತ್ತಿದ್ದೆ. ಆದರೀಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ. 

ಪೊಗರು ಸಿನಿಮಾದಲ್ಲಿ ಧ್ರುವಗೆ ಜೋಡಿಯಾಗಿದ್ದಾರೆ ರಶ್ಮಿಕಾ ಮಂದಣ್ಣ. ಈ ಚಿತ್ರವು ಫೆಬ್ರುವರಿ 19ಕ್ಕೆ ತೆರೆ ಕಾಣಲಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಂ ಲೈವ್‌ ಬಂದಿದ್ದ ಧ್ರುವ ಸರ್ಜಾ ಬಿಡುಗಡೆ ದಿನಾಂಕವನ್ನು ಸ್ಪಷ್ಟ‍ಪಡಿಸಿದ್ದರು. ಚಿತ್ರತಂಡ ಕೂಡ ಸಾಮಾಜಿಕ ಜಾಲತಾಣಗಳ ತನ್ನ ಅಧಿಕೃತ ಪುಟಗಳಲ್ಲಿ ದಿನಾಂಕ ಪ್ರಕಟಿಸಿದೆ. ಈ ಚಿತ್ರವನ್ನು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು