ಇತ್ತೀಚೆಗೆ ತೆರೆಕಂಡು ಮೆಚ್ಚುಗೆ, ಯಶಸ್ಸು ಪಡೆದಿರುವ ಎರಡು ಸಿನಿಮಾಗಳೆಂದರೆ ಜೆ.ಪಿ.ತೂಮಿನಾಡು ನಿರ್ದೇಶನದ ‘ಸು ಫ್ರಮ್ ಸೋ’ ಹಾಗೂ ಪುನೀತ್ ರಂಗಸ್ವಾಮಿ ನಿರ್ದೇಶನದ ‘ಏಳುಮಲೆ’. ಈ ಎರಡೂ ಸಿನಿಮಾಗಳಿಗಿರುವ ಸಾಮ್ಯತೆ ಏನೆಂದರೆ, ಇವುಗಳನ್ನು ನಿರ್ಮಿಸಿದವರು ನಿರ್ದೇಶಕರು.

‘ಚೌಕ’, ‘ರಾಬರ್ಟ್’, ‘ಕಾಟೇರ’ ಖ್ಯಾತಿಯ ತರುಣ್ ಕಿಶೋರ್ ಸುಧೀರ್ ಹಾಗೂ ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ದೇಶಿಸಿದ್ದ ರಾಜ್ ಬಿ.ಶೆಟ್ಟಿ ತಮ್ಮದೇ ತಂಡದಲ್ಲಿದ್ದವರ ಕಥೆಯ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡಿ ಗೆದ್ದವರು. ಇದೇ ರೀತಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರೂ ತಮ್ಮದೇ ‘ಸೆವೆನ್ ಆಡ್ಸ್’ನ ಸದಸ್ಯರ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಪೈಕಿ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಗಮನಸೆಳೆದಿತ್ತು. ಈ ರೀತಿ ನಿರ್ದೇಶಕರೇ ನಿರ್ಮಾಪಕರಾದರೆ ಸಿನಿಮಾವೊಂದಕ್ಕೆ ಹಲವು ಲಾಭವಿದೆ. ಆರಂಭದಲ್ಲೇ ಕಥೆಯ ಗುಣಮಟ್ಟದ ಮೌಲ್ಯಮಾಪನವಾಗುತ್ತದೆ, ಅನಗತ್ಯ ಖರ್ಚುಗಳಿಗೆ ಕಡಿವಾಣ ಬೀಳುತ್ತದೆ. ಇಂತಹ ಲಾಭದ ಜೊತೆಗೆ ಕೊಂಚ ಎಡವಿದರೆ ಸಮಸ್ಯೆಯೂ ಎದುರಾಗುತ್ತದೆ. ಇವುಗಳ ಬಗ್ಗೆ ರಾಜ್ ಬಿ.ಶೆಟ್ಟಿ ಹಾಗೂ ಪುನೀತ್ ರಂಗಸ್ವಾಮಿ ಹೀಗನ್ನುತ್ತಾರೆ.

ಅನಿವಾರ್ಯವಾಗಿ ನಿರ್ಮಾಪಕನಾದೆ: ರಾಜ್

‘ನಾನ್ಯಾಕೆ ನಿರ್ಮಾಪಕನಾದೆ ಎನ್ನುವ ಬಗ್ಗೆ ಹೇಳಿ ಮಾತು ಮುಂದುವರಿಸುತ್ತೇನೆ. ನಾನು ಕನಸಿನಲ್ಲೂ ನಿರ್ಮಾಪಕನಾಗಬೇಕು ಎಂದುಕೊಂಡಿರಲಿಲ್ಲ. ಇದು ಅನಿವಾರ್ಯವಾಗಿ ಆದದ್ದು. ಸಿನಿಮಾ ಕಥೆಯನ್ನು ಪಿಚ್ ಮಾಡುವಾಗ ನಮ್ಮ ಯೋಚನೆಯಂತೇ ನಿರ್ಮಾಪಕರ ಯೋಚನೆ ಇರುವುದಿಲ್ಲ. ನಿರ್ದೇಶಕ–ನಿರ್ಮಾಪಕ ಪರಸ್ಪರ ಜೊತೆಗೂಡಿ ಕೆಲಸ ಮಾಡುವುದೇ ಇಂದಿನ ಮುಖ್ಯ. ಹೊಸ ನಿರ್ದೇಶಕನಿಗೆ ಎದುರಾಗುವ ಸಮಸ್ಯೆಗಳು ಏನೆಂದು ನನಗೆ ಗೊತ್ತು. ನಿರ್ದೇಶಕನಾಗಿದ್ದಾಗ ನನಗೆ ಎದುರಾಗಿದ್ದ ತೊಂದರೆಗಳನ್ನೆಲ್ಲ ಮೊದಲೇ ನಿವಾರಣೆ ಮಾಡಿಕೊಟ್ಟು ಹೊಸ ನಿರ್ದೇಶಕರಿಗೆ ದಾರಿ ಮಾಡಿಕೊಡಬಹುದು. ನಿರ್ಮಾಣವೆಂದರೆ ಬರೀ ಹಣ ಹಾಕುವುದಲ್ಲ. ಬದಲಾಗಿ ಹೊಸ ಹುಡುಗರಿಗೆ ಸಮಸ್ಯೆಗಳನ್ನು ನಿವಾರಿಸಿ ಮಾರ್ಗದರ್ಶಕನಾಗುವುದು. ಈ ರೀತಿ ಮಾಡಿದರೆ ಸಿನಿಮಾಗಳಿಗೆ ಲಾಭ ಹೆಚ್ಚು. ಪ್ರಸ್ತುತ ದುಡ್ಡು ಹಾಕುವುದಷ್ಟೇ ನಿರ್ಮಾಣ ಎಂದುಕೊಂಡಿದ್ದಾರೆ. ಇದು ತಪ್ಪು. ಒಂದು ಸಿನಿಮಾಗೆ ಯಾವ ಕಲಾವಿದ, ಯಾವ ತಂತ್ರಜ್ಞ ಬಂದರೆ ನಿರ್ದೇಶಕನಿಗೆ ಸಿನಿಮಾ ಕಟ್ಟಲು ಸುಲಭವಾಗುತ್ತದೆ ಎನ್ನುವ ಅನುಭವವನ್ನು ಅಗತ್ಯ ಇದ್ದಾಗ ಧಾರೆ ಎರೆಯಬೇಕು. ಇದು ಬಹಳ ಮುಖ್ಯ. ಹಾಗೆಂದು ಇದು ಅತಿಯಾಗಬಾರದು. ಈ ಎಲ್ಲಾ ಕಾರಣದಿಂದ ನಿರ್ದೇಶಕರು ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ. ಇದರಿಂದ ಅಂದುಕೊಂಡ ಕನಸನ್ನು ಸರಿಯಾಗಿ ಕಟ್ಟಲು, ಗುಣಮಟ್ಟದ ಸಿನಿಮಾ ನೀಡಲು ಸಾಧ್ಯ. ಅನಗತ್ಯ ಖರ್ಚುವೆಚ್ಚಗಳಿಗೂ ಕಡಿವಾಣ ಬೀಳುತ್ತದೆ’ ಎಂದರು ರಾಜ್ ಬಿ.ಶೆಟ್ಟಿ.

‘ನಿರ್ದೇಶಕನೊಬ್ಬ ನಿರ್ಮಾಪಕನಾದಾಗ ದುಡ್ಡು ಹಾಕಿ ನಿಂತರೆ ಸಾಲುವುದಿಲ್ಲ. ಈ ಪ್ರಾಜೆಕ್ಟ್ ಏತಕ್ಕಾಗಿ ಆಯ್ಕೆ ಮಾಡಿದೆ? ಅದು ಎಲ್ಲಿ ದಾರಿ ತಪ್ಪುತ್ತಿದೆ? ಎನ್ನುವುದನ್ನು ಸೂಕ್ಷ್ಮವಾಗಿ ನೋಡುತ್ತಿರಬೇಕು. ನಮ್ಮ ಸಿನಿಮಾದಷ್ಟೇ ಜತನದಿಂದ ಕಾಣಬೇಕು. ಈ ರೀತಿ ಮಾಡದೇ ಇದ್ದಾಗ ಪ್ರಾಜೆಕ್ಟ್ಗಳು ಹಿಡಿತ ತಪ್ಪುತ್ತವೆ, ಹೊಸಬರಿಗೆ ಅವಕಾಶ ಸಿಗುವುದು ಕಡಿಮೆಯಾಗುತ್ತದೆ’ ಎನ್ನುತ್ತಾರೆ ರಾಜ್.

‘ನಿರ್ದೇಶಕನೇ ನಿರ್ಮಾಪಕನಾದರೆ ಎಷ್ಟೋ ಸಲ ಒಂದೇ ರೀತಿಯ ಸಿನಿಮಾಗಳು ಆಗುವ ಸಾಧ್ಯತೆಯೂ ಇದೆ. ಒಬ್ಬ ನಿರ್ದೇಶಕ ತನಗಿರುವ ಕಲ್ಪನೆಗಳಿಗೆ ಹೋಲಿಕೆಯಾಗುವ ಕಥೆಗಳನ್ನಷ್ಟೇ ಬೆಂಬಲಿಸಿದರೆ ಏಕತಾನತೆಯ ಸಿನಿಮಾಗಳು ಆಗುತ್ತವೆ. ಹೊಸ ನಿರ್ದೇಶಕರು ಹೇಳುವ ಭಿನ್ನ ಕಥೆಯನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಇರದೇ ಇದ್ದರೂ ಸಮಸ್ಯೆಯೇ. ಒಬ್ಬ ನಿರ್ದೇಶಕನಾಗಿ ನಿರ್ಮಾಪಕನಾಗುವಾತ ಹೆಚ್ಚಿನ ಹಸ್ತಕ್ಷೇಪ ಮಾಡುವ ಸಾಧ್ಯತೆಯೂ ಇರುತ್ತದೆ. ‘ಗ್ರೂಪಿಸಂ’ ಮಾತುಗಳೂ ಕೇಳಿಬರಬಹುದು. ಒಬ್ಬ ನಿರ್ದೇಶಕ ತನ್ನ ಶಕ್ತಿಯನ್ನು ಭಿನ್ನ ಕಲ್ಪನೆಯ ನಿರ್ದೇಶಕರನ್ನು ನೋಡಲು ಬಳಸಿಕೊಂಡರೆ ಯಶಸ್ವಿ ಸಿನಿಮಾಗಳನ್ನು ನೀಡಲು ಸಾಧ್ಯ’ ಎಂದರು ರಾಜ್.

ಈ ರೀತಿ ಹೆಜ್ಜೆಯಿಂದ ನಿರ್ದೇಶಕರ ಹೊಸ ಪೀಳಿಗೆಯನ್ನು ಸೃಷ್ಟಿಸಲು ಸಾಧ್ಯ. ತನ್ನ ಸುತ್ತಮುತ್ತ ಇರುವವರಲ್ಲಿ ಯಾರಿಗೆ ನಿರ್ದೇಶನದ ಸಾಮರ್ಥ್ಯವಿದೆ ಎಂಬುವುದು ನಿರ್ದೇಶಕನೊಬ್ಬನಿಗೆ ತಿಳಿದಿರುತ್ತದೆ. ಇದರಿಂದ ಸರಿಯಾದ ವ್ಯಕ್ತಿಗೆ ಅವಕಾಶ ಸಿಗುವುದು ಹೆಚ್ಚಾಗುತ್ತದೆ.
–ರಾಜ್ ಬಿ.ಶೆಟ್ಟಿ ನಟ

‘ಸಿನಿಮಾಗೆ ಪೂರಕವಾದ ಚರ್ಚೆ ಅಗತ್ಯ’

‘ಒಬ್ಬ ಯಶಸ್ವಿ ನಿರ್ದೇಶಕರೇ ನಿರ್ಮಾಪಕರಾಗಿ ಸಿಕ್ಕಿದಾಗ ಆಗುವ ಲಾಭ ದುಪ್ಪಟ್ಟು’ ಎನ್ನುತ್ತಾ ಮಾತು ಆರಂಭಿಸಿದ ‘ಏಳುಮಲೆ’ ಸಿನಿಮಾ ನಿರ್ದೇಶಕ ಪುನೀತ್ ರಂಗಸ್ವಾಮಿ ‘ಅನುಭವಿ ನಿರ್ದೇಶಕರ ಸಲಹೆ ಸೂಚನೆಗಳು ಎಲ್ಲವೂ ನಮಗೆ ದೊರೆಯುತ್ತದೆ. ಈ ಬದಲಾವಣೆಗಳನ್ನು ಸ್ವೀಕರಿಸುವ ಮನಃಸ್ಥಿತಿ ಹೊಸ ನಿರ್ದೇಶಕರಿಗೆ ಇರಬೇಕು ಅಷ್ಟೇ. ಹೀಗಾದಾಗ ಇಂತಹ ಸಿನಿಮಾಗಳು ಹೊರಬರಲು ಸಾಧ್ಯ. ಜೊತೆಗೆ ಮುಖ್ಯವಾಗಿ ನಿರ್ಮಾಪಕರನ್ನು ಒಪ್ಪಿಸುವ ಕೆಲಸವೂ ಸುಲಭ. ಹೊಸ ನಿರ್ಮಾಪಕರಾಗಿದ್ದರೆ ಬಜೆಟ್ ಬಗ್ಗೆ ಕಲಾವಿದರ ಬಗ್ಗೆ ಶೂಟಿಂಗ್ ದಿನಗಳ ಬಗ್ಗೆ ಎಲ್ಲವನ್ನೂ ವಿವರಿಸಬೇಕು ಮನವರಿಕೆ ಮಾಡಿಕೊಡಬೇಕು. ಆದರೆ ನಮ್ಮ ನಿರ್ಮಾಪಕರಿಗೆ ಏನು ಬೇಕು ಏನು ಬೇಡ ಎನ್ನುವುದು ಮೊದಲೇ ತಿಳಿದಿತ್ತು. ಕೇಳುವುದಷ್ಟೇ ನನ್ನ ಕೆಲಸವಾಗಿತ್ತು. ಹೀಗಾಗಿ ಸಮಯದ ಉಳಿತಾಯವೂ ಆಯಿತು’ ಎಂದರು.

‘ನನ್ನ ಹಾಗೂ ತರುಣ್ ಅವರ ಮೇಕಿಂಗ್ ಮಾದರಿ ಬೇರೆ ಬೇರೆ. ಆದರೆ ನಾನು ತರುಣ್ ಅವರ ಜೊತೆಯೇ ಕೆಲಸ ಮಾಡಿದ್ದ ಕಾರಣ ಸಿನಿಮಾ ಮಾಡುವ ಪ್ಲ್ಯಾನಿಂಗ್ ಕಲಿತಿದ್ದೆ. ಈ ಸಿನಿಮಾ ಮಾಡುವಾಗ ನಾನೇ ಒಂದಿಷ್ಟು ಇತಿಮಿತಿಗಳನ್ನು ಹಾಕಿಕೊಂಡಿದ್ದೆ. ಹೆಚ್ಚಿನ ಜೂನಿಯರ್ ಕಲಾವಿದರು ಬೇಡ ಹೆಚ್ಚಿನ ಸೆಟ್ ಬೇಡ ಎಂದಿದ್ದೆ. ಆದರೆ ಈ ವಿಚಾರದಲ್ಲಿ ತರುಣ್ ಅವರು ಕೆಲ ಸಲಹೆಗಳನ್ನು ನೀಡಿ ಬದಲಾವಣೆಗೆ ಸೂಚಿಸಿದರು. ಒಬ್ಬ ನಿರ್ದೇಶಕನ ಕಥೆಯನ್ನು ಈ ರೀತಿಯ ಸಲಹೆಗಳ ಮೂಲಕ ಇನ್ನಷ್ಟು ಉತ್ತಮಪಡಿಸಿದರೆ ಒಳ್ಳೆಯದಲ್ಲವೇ. ಉದಾಹರಣೆಗೆ ಸಿನಿಮಾದೊಳಗಿನ ನಟ ಜಗಪತಿ ಬಾಬು ಅವರ ಪಾತ್ರ. ಈ ಪಾತ್ರಕ್ಕೆ ಕಥೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯವಿಲ್ಲ. ಹೀಗಾಗಿ ಈ ಪಾತ್ರಕ್ಕೆ ಸಾಮಾನ್ಯ ಕಲಾವಿದರೊಬ್ಬರು ಸಾಕು ಎಂದು ನಾನು ಹೇಳಿದ್ದೆ. ಆದರೆ ರಿಯಲ್ ಲೈಫ್ನಲ್ಲಿ ಈ ಪಾತ್ರ ಬಹಳ ಗಟ್ಟಿಯಾಗಿದೆ. ಜಗಪತಿ ಬಾಬು ಅವರಂಥ ಕಲಾವಿದ ಇದನ್ನು ಸಮರ್ಥವಾಗಿ ದಾಟಿಸುತ್ತಾರೆ ಎನ್ನುವುದು ತರುಣ್ ಅವರ ಯೋಚನೆಯಾಗಿತ್ತು. ಪ್ರೇಕ್ಷಕರು ಕುತೂಹಲದಿಂದ ಈ ಕಥೆಯನ್ನು ನೋಡಲು ಆ ಪಾತ್ರವೂ ಮುಖ್ಯವಾಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಹೀಗೆ ನಿರ್ಮಾಪಕ–ನಿರ್ದೇಶಕರ ನಡುವೆ ಸಿನಿಮಾಗೆ ಪೂರಕವಾದ ವಿಷಯಗಳ ಬಗ್ಗೆ ಚರ್ಚೆಯಾದರೆ ಉತ್ತಮ’ ಎನ್ನುತ್ತಾರೆ ಪುನೀತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.